Saturday, April 27, 2024
spot_imgspot_img
spot_imgspot_img

ವರದಾ ನದಿಗೆ ಬೋರ್​ವೆಲ್ ನೀರು ಹರಿಸುತ್ತಿರುವ ರೈತ:

- Advertisement -G L Acharya panikkar
- Advertisement -

ಈ ಬಾರಿ ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲಕ್ಕೆ ರಾಜ್ಯದಲ್ಲಿ ಜಲಕ್ಷಾಮ ಎದುರಾಗಿದೆ. ಇದಕ್ಕೆ ಹಾವೇರಿ ಜಿಲ್ಲೆ ಏನು ಹೊರತಾಗಿಲ್ಲ.
ಜಿಲ್ಲೆಯ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ರೈತ ಭುವನೇಶ್ವರ ಶಿಡ್ಲಾಪು ತನ್ನ ಸ್ವಂತ ದುಡ್ಡಿನಲ್ಲಿ ಬೋರ್ ವೇಲ್ ಕೊರಸಿ ವರದಾ ನದಿಗೆ ನೀರು ಬಿಟ್ಟಿದ್ದಾನೆ‌. ಕಳೆದ ಹದಿನೈದು ದಿನದಿಂದ ನಿತ್ಯ ನೀರು ಬಿಡುತ್ತಿರುವುದರಿಂದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆಯಾಗಿದೆ ಅಂತ್ತಿದ್ದಾರೆ ಸಂಗೂರು ಗ್ರಾಮದ ರೈತರು.

ಸಂಗೂರು ಗ್ರಾಮದ ರೈತ ಮುಖಂಡ ಭುವನೇಶ್ವರ ಶಿಡ್ಲಾಪುರ ವರದಾ ನದಿಯ ಪಕ್ಕದಲ್ಲೇ ಇರುವ ತನ್ನ 20 ಎಕರೆ ಜಮೀನಿಗೆ ಎರಡು ಪಂಪ್ ಸೇಟ್ ಮೂಲಕ ನೀರು ಹಾಕುತ್ತಿದ್ದ ಪಂಪ್ ಸೇಟ್ ನಂಬಿ ಅಡಿಕೆ, ತೆಂಗು, ಭತ್ತ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದ. ವರದಾ ನದಿ ನೀರು ಬತ್ತಿದ ಹಿನ್ನಲೆ ಬೆಳೆ ಒಣಗಲಾರಂಭಿಸಿದ್ದು ಹೀಗಾಗಿ ಎರಡು ಲಕ್ಷ ರೂ. ಹಣ ಖರ್ಚು ಮಾಡಿ ಹದಿನೈದು ದಿನದ ಹಿಂದೆ ಬೋರ್ ವೇಲ್ ಕೊರೆಸಿದ್ದರು. ಐದು ಇಂಚು ನೀರು ಸಿಕ್ಕಿತ್ತು

ಗ್ರಾಮದಲ್ಲಿ ಎದುರಾಗಿರುವ ಜಲಕ್ಷಾಮ ಅರಿತುಕೊಂಡ ಭುವನೇಶ್ವರ ತನ್ನ ಬೆಳೆ ಒಣಗಿದರು ಪರವಾಗಿಲ್ಲಾ ಎಂದು ಯಾವುದೇ ಫಲಾಪೇಕ್ಷ ಬಯಸದೆ ರೈತರ ಜಾನುವಾರುಗಳಿಗೆ ಮತ್ತು ವನ್ಯಜೀವಿಗಳಿಗೆ ಅನುಕೂಲವಾಗಲಿ ಎಂದು ಬೋರ್ ನೀರು ತೆಗೆದ ದಿನದಿಂದಲೂ ವರದಾ ನದಿಗೆ ನೀರು ಬಿಟ್ಟಿದ್ದಾರೆ. ಸರ್ಕಾರ ರೈತರ ನೇರವಿಗೆ ಬರಬೇಕು ಎಂದು ಒತ್ತಾಯ ಮಾಡಲಾಗಿದೆ.

- Advertisement -

Related news

error: Content is protected !!