

ಉಡುಪಿ: ಗ್ರಾಮ ಪಂಚಾಯತ್ ಸದಸ್ಯ ಹೋಟೆಲ್ ಗೆ ಯಾವ ಪರವಾನಿಗೆ ಇಲ್ಲದೆ ಉದ್ಯಮ ನೆಡೆಸುತ್ತಿರುವ ಬಗ್ಗೆ ಪೆರ್ಡೂರ್ ಗ್ರಾಮ ಪಂಚಾಯತ್ ಸದಸ್ಯ ತುಕಾರಾಮ್ ನಾಯಕ್ ವಿರುದ್ಧ ಸ್ಥಳೀಯರು ದೂರು ನೀಡಿದ್ದು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆಹಾರ ನೀರಿಕ್ಷಕರಿಗೆ ಹಾಗೂ ಜಿಲ್ಲಾ ಅರೋಗ್ಯ ಅಧಿಕಾರಿಗಳನ್ನು ಅಗ್ರಹಿಸಿದ್ದಾರೆ.ಹೋಟೆಲ್ ಗೆ ಕೂಡಲೇ ಬೀಗ ಜಡಿಯುವಂತೆ ಅಗ್ರಹಿಸಿದ್ದಾರೆ.
ಪ್ರಸ್ತುತ ಪೆರ್ಡೂರ್ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ಇರುವ ಕೃಷ್ಣ ಭವನ್ ಗೆ ಪಂಚಾಯತ್ ಹೋಟೆಲ್ ಉದ್ಯಮಕ್ಕೆ ಅನುಮತಿ ನೀಡಿಲ್ಲ.
ಆಹಾರ ನೀರಿಕ್ಷಕರ,ಅನುಮತಿ ಇಲ್ಲ ಇಲಾಖೆಯ, ಹಾಗೂ ಕಾರ್ಮಿಕ ಇಲಾಖೆ ಸಂಬಂಧಪಟ್ಟ ಇಲಾಖೆಗಳ ಮೇಲೆ ತನ್ನ ರಾಜಕೀಯ ಪ್ರಭಾವ ಬಳಸಿ ತನ್ನ ಹೋಟೆಲ್ ಉದ್ಯಮ ನೆಡೆಸುತ್ತಿರುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಪಂಚಾಯತ್ ಸದಸ್ಯ ತುಕಾರಾಮ್ ನಾಯಕ್ ಪೆರ್ಡೂರ್ ಗ್ರಾಮ ಪಂಚಾಯತ್‌ನ ಗ್ರಾಮ ನೈರ್ಮಲ್ಯ ಸಮಿತಿ ಅಧ್ಯಕ್ಷನಾಗಿದ್ದು ತನ್ನ ಹೋಟೆಲ್ ನಿಂದ ಕೊಳಚೆ ನೀರು ದೇವಸ್ಥಾನದ ಮುಂಭಾಗದಲ್ಲಿರುವ ಬಾವಿ ಸಮೀಪಕ್ಕೆ ಬಿಟ್ಟು ಪರಿಸರ ಮಾಲಿನ್ಯ ಉಂಟು ಮಾಡಿ ಡೆಂಗ್ಯೂ, ಮಲೇರಿಯಾ, ಮುಂತಾದ ಸಂಕ್ರಾಮಿಕ ರೋಗ ಹರಡಲು ಕಾರಣರಾಗಿರುವುದರಿಂದ ಕೂಡಲೇ ತುಕಾರಾಮ್ ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.