Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಕರುವನ್ನು ಕೊಂದು ತಿಂದ ಚಿರತೆ

- Advertisement -
- Advertisement -

ಬಂಟ್ವಾಳ : ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವೊಂದನ್ನು ಚಿರತೆ ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಯ ನೈನಾಡು ಎಂಬಲ್ಲಿ ಇಂದು ನಡೆದಿದೆ.

ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳು ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ.ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಒಂದು ಕರುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡುಹೋಗಿರಬಹುದು ಎಂದು ಶಂಕಿಸಲಾಗಿದೆ. ನಾಯಿಗಳು ಬೊಗಳಿದೆಯಾದರು ಚಿರತೆ ಬಂದು ಈ ತರಹ ಮಾಡಬಹುದು ಎಂಬುದು ತಿಳಿದಿರಲಿಲ್ಲ ಎಂದು ಮನೆಯವರು ಹೇಳುತ್ತಾರೆ‌.

ಯಾಕೆಂದರೆ ಈವರೆಗೆ ಪರಿಸರದಲ್ಲಿ ಚಿರತೆ ದಾಳಿ ಬಗ್ಗೆ ತಿಳಿದಿಲ್ಲ. ಹಾಗಾಗಿ ನಾಯಿಗಳು ಅಷ್ಟು ಜೋರಾಗಿ ಬೊಗಳಿದರೂ ಇಂತಹ ಯೋಚನೆ ಬಂದಿರಲಿಲ್ಲ.ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಕರುವನ್ನು ಎಳೆದುಕೊಂಡು ಹೋಗಿ ಕೊಂದು‌‌ಬಳಿಕ ತಿಂದಿದೆ.ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!