Saturday, June 6, 2026
spot_imgspot_img
spot_imgspot_img

ಮಸೂದ್‌ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

- Advertisement -
- Advertisement -

ಮಸೂದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ಪೈಕಿ ಇದೀಗ ಮತ್ತೆ ಮೂವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿದೆ. ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂರನೇ ಆರೋಪಿ ಸುಧೀರ್‌, ಐದನೇ ಆರೋಪಿ ರಂಜಿತ್‌ ಬಿ ಹಾಗೂ ಆರನೇ ಸದಾಶಿವ ಪೂಜಾರಿಗೆ ಜಾಮೀನು ದೊರೆತಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿತ್ತು. ಇತ್ತೀಚಿಗೆ ಈ ಪ್ರಕರಣ ಎಂಟನೇ ಆರೋಪಿ ಭಾಸ್ಕರ್‌, ಏಳನೇ ಆರೋಪಿ ಜಿಮ್‌ ರಂಜಿತ್‌ ಹಾಗೂ ನಾಲ್ಕನೇ ಆರೋಪಿ ಶಿವಪ್ರಸಾದ್ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ಮತ್ತೆ ಮೂವರಿಗೆ ಜಾಮೀನು ದೊರೆತಿದ್ದು, ಈ ಪ್ರಕರಣ ಒಟ್ಟು ಆರು ಜನರಿಗೆ ಜಾಮೀನು ದೊರೆತಂತಾಗಿದೆ.

- Advertisement -

Related news

error: Content is protected !!