Saturday, June 13, 2026
spot_imgspot_img
spot_imgspot_img

ಕ್ರಿಸ್​ಮಸ್ ಪಾರ್ಟಿಯಲ್ಲಿ ಸ್ನೇಹಿತರ ಮಧ್ಯೆ ಗಲಾಟೆ; ಮಾರಕಾಸ್ತ್ರಗಳಿಂದ ಕೊಚ್ಚಿ ಗೆಳೆಯನ ಕೊಲೆ..!

- Advertisement -
- Advertisement -

ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರಿನ ಭೀಮಸಂದ್ರ ಬಳಿಯ ಬೆತ್ತಲೂರಿನಲ್ಲಿ ನಡೆದಿದೆ.

ಆರೋಪಿಯನ್ನು ಮಧು (40) ಹಾಗೂ ಮೃತಪಟ್ಟ ವ್ಯಕ್ತಿ ನಿರಂಜನ್ (35) ಎಂದು ಗುರುತಿಸಲಾಗಿದೆ.

ಕ್ರಿಸ್​ಮಸ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಮದ್ಯಪಾನ ಪಾರ್ಟಿಯಲ್ಲಿ ನಿರಂಜನ್ ಮತ್ತು ಮಧು ಎನ್ನುವರ ನಡುವೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರಿದ್ದರಿಂದ ಮಧು ಹಾಗೂ ಈತನ ಸಹಚರರು ಸೇರಿ ನಿರಂಜನ್​​ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿ ಮಧು ರೌಡಿಶೀಟರ್ ಎಂದು ಹೇಳಲಾಗುತ್ತಿದ್ದು ಕೊಲೆಯಾದ ವ್ಯಕ್ತಿ ಬೀಲ್ಡಿಂಗ್‌ ಕಂಟ್ರಾಕ್ಟರ್ ಆಗಿದ್ದರು ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದು, ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Related news

error: Content is protected !!