Saturday, June 20, 2026
spot_imgspot_img
spot_imgspot_img

ಖಾಸಗಿ ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಸಾಫ್ಟ್‌ ವೇರ್‌ ಇಂಜಿನಿಯರ್‌ ಆತ್ಮಹತ್ಯೆ

- Advertisement -
- Advertisement -
This image has an empty alt attribute; its file name is baby-sitting-new-853x1024.jpeg

ಬೆಂಗಳೂರು ಮೂಲದ ಸಾಫ್ಟ್‌ ವೇರ್‌ ಇಂಜಿನಿಯರ್‌ ಒಬ್ಬರು ಮಡಿಕೇರಿಯ ಹೋಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಸಂದೇಶ್ (35) ಅತ್ಮಹತ್ಯೆಗೆ ಶರಣಾದವರು.

ಕಳೆದ 2 ದಿನಗಳಿಂದ ಹೊಟೇಲ್‌ನಲ್ಲಿ ತಂಗಿದ್ದ ಸಂದೇಶ್ ಅವರು ಕಿಟಕಿಯ ಸರಳಿಗೆ ಬಟ್ಟೆಯನ್ನೇ ನೇಣಾಗಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು, ಕೋಣೆಯಲ್ಲಿ ಡೆತ್‌ ನೋಟ್‌ ಕೂಡಾ ಸಿಕ್ಕಿದೆ. ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ, ಎಲ್ಲರಿಗೂ ಗುಡ್‌ ಬೈ, ಯಾರೂ ಬೇಸರ ಮಾಡಬಾರದು ಎಂದು ಬರೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕನ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಶವವನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

- Advertisement -

Related news

error: Content is protected !!