Sunday, June 7, 2026
spot_imgspot_img
spot_imgspot_img

ರಜೆ ಮೇಲೆ ಮನೆಗೆ ತೆರಳಿದ್ದ ಯೋಧ ನಾಪತ್ತೆ; ಭಯೋತ್ಪಾದಕರೇ ಕಿಡ್ಯಾಪ್‌ ಮಾಡಿರಬಹುದು ಎಂದು ಕುಟುಂಬಸ್ಥರ ಶಂಕೆ..!

- Advertisement -
- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಓರ್ವ ಸೇನಾ ಯೋಧ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಲಡಾಖ್ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಲೈಟ್ ಇನ್‌ಫ್ರೆಂಟ್ರಿ ರೆಜಿಮೆಂಟ್‌ನ ರೈಫಲ್ ಮನ್ ಜಾವೈದ್ ಅಹ್ಮದ್ ವಾನಿ ಶನಿವಾರ ಸಂಜೆ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿ ಜಾವೈದ್ ಅಹ್ಮದ್ ವಾನಿ ರಜೆಯಲ್ಲಿದ್ದರು. ಶನಿವಾರ ಸಂಜೆ 6.30ರ ವೇಳೆಗೆ ಜಾವೇದ್ ಅಹ್ಮದ್ ತಮ್ಮ ಮನೆಗೆ ಬೇಕಾದ ಸಾಮಗ್ರಿಗಳನ್ನು ತರಲು ಮಾರುಕಟ್ಟೆಗೆ ತೆರಳಿದ್ದರು. ರಾತ್ರಿ 9 ಗಂಟೆಯಾದರೂ ಜಾವೇದ್ ವಾಪಸ್ ಬಂದಿರಲಿಲ್ಲ. ಹೀಗಾಗಿ, ಜಾವೇದ್ ಕುಟುಂಬ ಸದಸ್ಯರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಮಾರುಕಟ್ಟೆ ಪ್ರದೇಶದ ಬಳಿ ಜಾವೇದ್ ಚಲಾಯಿಸುತ್ತಿದ್ದ ಆಲ್ಟೋ ಕಾರು ಪತ್ತೆಯಾಗಿತ್ತು. ಕಾರ್‌ನ ಒಳಗೆ ರಕ್ತದ ಕಲೆಗಳೂ ಪತ್ತೆಯಾಗಿದ್ದವು.

ಈ ಪ್ರಕರಣದ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ಕೆಲವು ಶಂಕಿತರನ್ನೂ ವಶಕ್ಕೆ ಪಡೆಯಲಾಗಿದೆ. 25 ವರ್ಷ ವಯಸ್ಸಿನ ಈ ಸೈನಿಕನ ಪತ್ತೆಗೆ ಭದ್ರತಾ ಪಡೆಗಳೂ ಕೂಡಾ ಹುಡುಕಾಟ ಆರಂಭಿಸಿವೆ.ಇನ್ನು ಸೈನಿಕ ಜಾವೇದ್‌ ಅಹ್ಮದ್‌ನ ಕುಟುಂಬಸ್ಥರು ಇದೊಂದು ಅಪಹರಣ ಪ್ರಕರಣ ಇರಬಹುದು ಎಂದು ಶಂಕಿಸಿದ್ದಾರೆ.

ಭಯೋತ್ಪಾದಕರೇ ತಮ್ಮ ಮಗನನ್ನು ಅಪಹರಣ ಮಾಡಿರಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಜಾವೇದ್ ಕುಟುಂಬಸ್ಥರು, ತಮ್ಮ ಮಗನನ್ನು ಬಿಡುಗಡೆ ಮಾಡುವಂತೆ ಉಗ್ರರಿಗೆ ಮನವಿ ಸಲ್ಲಿಸಿದ್ದಾರೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ದಯವಿಟ್ಟು ನಮ್ಮ ಮಗ ಜಾವೇದ್ ಅಹ್ಮದ್‌ನನ್ನು ಬಿಡುಗಡೆ ಮಾಡಿ, ನಾವು ಆತ ಸೇನೆಯಲ್ಲಿ ಕೆಲಸ ಮಾಡದಂತೆ ನೋಡಿಕೊಳ್ಳುತ್ತೇವೆ. ಸೇನೆಯ ಕೆಲಸದಿಂದ ಬಿಡಿಸುತ್ತೇವೆ. ಸೈನಿಕನ ತಾಯಿ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

- Advertisement -

Related news

error: Content is protected !!