Friday, May 3, 2024
spot_imgspot_img
spot_imgspot_img

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸಬ್‌ಇನ್ಸ್‌ಪೆಕ್ಟರ್‌; ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ..!

- Advertisement -G L Acharya panikkar
- Advertisement -

4 ವರ್ಷದ ಬಾಲಕಿ ಮೇಲೆ ಸಬ್ ಇನ್ಸ್‌ಪೆಕ್ಟರ್‌ ಅತ್ಯಾಚಾರ ಎಸಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಾಲಕಿಯನ್ನು ಪುಸಲಾಯಿಸಿ ಕೋಣೆಗೆ ಕರೆದುಕೊಂಡು ಹೋದ ಎಸ್‌ಐ ಭೂಪೇಂದ್ರ ಸಿಂಗ್ ರೇಪ್ ಮಾಡಿದ್ದಾನೆ ಎನ್ನಲಾಗಿದೆ.

ರಾಜಾಸ್ಥಾನದ ದೌಸಾ ಜಿಲ್ಲೆಯ ಲಾಲೋಟ್ಸ್ ಪ್ರದೇಶದ ರಾಹುವಾಸ್‌​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನರೆಲ್ಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಆರೋಪಿ ಸಬ್‌ ಇನ್ಸ್‌ಪೆಕ್ಟರ್ ಕೈಗೆ ಸಿಗುತ್ತಿದ್ದಂತೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ರಾಹುವಾಸ್​ ಪೊಲೀಸ್ ಠಾಣೆಗೆ ನೂರಾರು ಜನ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್‌ ಅನ್ನ ಸ್ಥಳಾಂತರಿಸಲು ಮುಂದಾಗಿದ್ದಾರೆ. ಆದರೆ ಪೊಲೀಸರು ಬಂಧಿಸೋ ಮುನ್ನ ಎಸ್​ಐಗೆ ಜನರು ಧರ್ಮದೇಟು ಕೊಟ್ಟಿದ್ದಾರೆ. ಪೊಲೀಸ್ ಠಾಣೆಯಿಂದ ರಸ್ತೆಯುದ್ದಕ್ಕೂ ಜನರು ಒದ್ದು, ಒದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ವರ್ಷದ ಬಾಲಕಿಯ ಪಾಲಿಗೆ ರಾಕ್ಷಸನಾದ ಆರಕ್ಷಕನನ್ನು ನಡುರೋಡಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಕೊನೆಗೆ ರಾಹುವಾಸ್ ಪೊಲೀಸ್ ಠಾಣೆಯಿಂದ ಸಾಗಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಬ್ ಇನ್ಸ್‌ಪೆಕ್ಟರ್‌ನ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

- Advertisement -

Related news

error: Content is protected !!