Friday, May 17, 2024
spot_imgspot_img
spot_imgspot_img

ಟೈಯರ್ ಸ್ಫೋಟಗೊಂಡು ಟೆಂಪೋ ಪಲ್ಟಿ; 3 ಸಾವು, 6 ಮಂದಿ ಗಂಭೀರ..!

- Advertisement -G L Acharya panikkar
- Advertisement -

ಟೈಯರ್ ಸ್ಫೋಟಗೊಂಡು ಬುಲೆರೋ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆ ನಗರದ ಹೊರವಲಯದ ಪಂಜಾಬಿ ಡಾಬಾ ಬಳಿಯ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತಪಟ್ಟವರನ್ನು ಆಂಧ್ರದ ಮಂತ್ರಾಲಯಂ ತಾಲೂಕಿನ ಸಿಂಗರಾಜನಹಳ್ಳಿ ಗ್ರಾಮದ ನಿವಾಸಿಗಳಾದ ಮುಸ್ತಾನ್ (50), ಎಸ್.ಟಿ ವೀರಣ್ಣ (30), ಪೆದ್ದ ವೆಂಕಣ್ಣ (38) ಎಂದು ಗುರುತಿಸಲಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಿಂದ ಮೆಣಸಿಕಾಯಿ ತೆಗೆದುಕೊಂಡು ತಡರಾತ್ರಿ ವಾಪಸ್ ತಮ್ಮೂರಿಗೆ ಹೋಗುವಾಗ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!