Monday, May 6, 2024
spot_imgspot_img
spot_imgspot_img

ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಹೆಣ್ಣು ಮಗು

- Advertisement -G L Acharya panikkar
- Advertisement -

ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಬಿದ್ದಿರುವ ಘಟನೆ ಮಧ್ಯ ಪ್ರದೇಶದ ಸೆಹೋರ್‌ ಜಿಲ್ಲೆಯ ಮುಗವಲಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಮಂಗಳವಾರ ಮಧ್ಯಾಹ್ನ ಸೃಷ್ಟಿ ಕುಶ್ವಾಹ ಎನ್ನುವ ಮಗು ಜಮೀನಿನಲ್ಲಿ ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ ಡಿಆರ್‌ ಎಫ್‌, ಎನ್‌ ಡಿಆರ್‌ ಎಫ್‌ ಸ್ಥಳೀಯ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಸಿದ್ದಾರೆ.

300 ಅಡಿ ಆಳದ ಕೊಳವೆ ಬಾವಿಗೆ ಮಗು ಬಿದ್ದಿದ್ದು, 20-25 ಅಡಿ ಆಳದಲ್ಲಿ ಮಗು ಸಿಲುಕಿದೆ. ಜೆಸಿಬಿ ಮೂಲಕ ಮತ್ತೊಂದು ಗುಂಡಿ ಅಗೆಯಲಾಗುತ್ತಿದ್ದು, ಆಮ್ಲಜನಕ ಸರಬರಾಜನ್ನು ನೀಡಿ ಮಗುವಿನ ಚಲನವಲಗಳ ಮೇಲೆ ನಿಗಾ ಇಡಲಾಗುತ್ತಿದೆ.

ಘಟನೆ ನಡೆದು 12 ಗಂಟೆ ಕಳೆದಿದೆ. ನಾವು ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲು ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದ್ದೇವೆ. ಮಗುವಿನ ಚಲನವಲನ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಸೆಹೋರ್ ಪಂಚಾಯತ್ ಅಧಿಕಾರಿ ಆಶಿಶ್ ತಿವಾರಿ ಪಿಟಿಐಗೆ ಹೇಳಿದ್ದಾರೆ.

ಇತ್ತೀಚೆಗಷ್ಟೇ ಗುಜರಾತ್‌ ನ ಜಾಮ್‌ನಗರ ನಗರದಿಂದ 40 ಕಿ.ಮೀ ದೂರದಲ್ಲಿರುವ ತಮಾಚನ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಸೇರಿದ 2 ವರ್ಷದ‌ ಹೆಣ್ಣು ಮಗು ಆಟವಾಡುತ್ತಿದ್ದಾಗ ಕೃಷಿ ಜಮೀನಲ್ಲಿದ್ದ 200 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿತ್ತು. ಸತತ 19 ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಮಗು ಸುರಕ್ಷಿತವಾಗಿ ಬದುಕಿ ಬರಲಿಲ್ಲ.

- Advertisement -

Related news

error: Content is protected !!