- Advertisement -
- Advertisement -




ಯುವಕನ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿದ ಬಾಲಕಿ ವರ್ಷಿಣಿ (14) ಎಂದು ಗುರುತಿಸಲಾಗಿದೆ.
ಪ್ರೀತಿಸುವಂತೆ ಯುವಕ ತ್ಯಾಗರಾಜ್ ವರ್ಷಿಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಈ ವಿಚಾರ ತಿಳಿದ ವರ್ಷಿಣಿ ಪೋಷಕರು ಎರಡು ತಿಂಗಳ ಹಿಂದೆ ತ್ಯಾಗರಾಜ್‌ಗೆ ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ತ್ಯಾಗರಾಜ್ ಪ್ರೀತಿಸುವಂತೆ ಪೀಡಿಸುವುದನ್ನು ಮುಂದುವರೆಸಿದನು ಎಂದು ತಿಳಿದು ಬಂದಿದೆ. ತ್ಯಾಗರಾಜ್‌ನ ಕಿರುಕುಳ ತಾಳಲಾರದೆ ವರ್ಷಿಣಿ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಕುಟುಂಬದ್ಧರು ತ್ಯಾಗರಾಜ್ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -