Monday, April 29, 2024
spot_imgspot_img
spot_imgspot_img

ಉಚಿತ ಮೆಡಿಕಲ್ ಸೀಟ್​ ಗಿಟ್ಟಿಸಿಕೊಂಡಿದ್ದ ಯುವತಿ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ರ‍್ಯಾಂಕ್ ಪಡೆದು ಮೆಡಿಕಲ್​ ಕಾಲೇಜೊಂದರಲ್ಲಿ ಉಚಿತ ಸೀಟ್​ ಗಿಟ್ಟಿಸಿಕೊಂಡಿದ್ದ ಯುವತಿ ಸಾವಿಗೆ ಶರಣಾದ ಘಟನೆ ಕೋಲಾರದಲ್ಲಿ ನಡೆದಿದೆ. ಮೃತ ಯುವತಿಯನ್ನು ದರ್ಶಿನಿ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಸಂಬಂಧಿಕರು ಕಾಲೇಜು ಆಡಳಿತ ಮಂಡಳಿಯ ಮೇಲೆ ಕಿರುಕುಳದ ಆರೋಪವನ್ನು ಹೊರಿಸಿದ್ದಾರೆ. ಈ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಮೃತ ದರ್ಶಿನಿಯ ಸಂಬಂಧಿಕರಾದ ಶ್ರೀನಿವಾಸ್ ಹಾಗೂ ಹನುಮಂತಪ್ಪ ಆರೋಪ ಮಾಡಿದ್ದಾರೆ.

ದರ್ಶಿನಿ, ಕಳೆದ ಎರಡು ವರ್ಷದ ಹಿಂದೆಯಷ್ಟೆ ತಂದೆಯನ್ನು ಕಳೆದುಕೊಂಡಿದ್ದರು. ಈಕೆ ರ‍್ಯಾಂಕ್ ಪಡೆದು ಉಚಿತ ಕೋಟಾದಡಿ ಮೆಡಿಕಲ್ ಸೀಟ್ ಪಡೆದುಕೊಂಡಿದ್ದ ದರ್ಶಿನಿ ಆತ್ಮಹತ್ಯೆಗೆ ಮೆಡಿಕಲ್ ಕಾಲೇಜಿನವರೇ ಕಾರಣ ಎನ್ನಲಾಗುತ್ತಿದೆ. ಇದುವರೆಗೂ ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

- Advertisement -

Related news

error: Content is protected !!