Friday, May 3, 2024
spot_imgspot_img
spot_imgspot_img

ಅಣ್ಣನೊಂದಿಗೆ ಟ್ಯೂಷನ್ ತೆರಳುತ್ತಿದ್ದ ಬಾಲಕಿಯ ಅಪಹರಣ; 10 ಲಕ್ಷಕ್ಕೆ ಬೇಡಿಕೆ..!

- Advertisement -G L Acharya panikkar
- Advertisement -

ತನ್ನ ಮನೆಯಿಂದ ಅಣ್ಣನೊಂದಿಗೆ ಟ್ಯೂಷನ್ ತರಗತಿಗೆ ತೆರಳುತ್ತಿದ್ದ ಬಾಲಕಿಯನ್ನು ನಾಲ್ಕು ಮಂದಿಯ ತಂಡವೊಂದು ಅಪಹರಿಸಿದ ಘಟನೆ ಕೊಲ್ಲಂನ ಒಯೂರ್ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಬಾಲಕಿ ಅಬಿಗೆಲ್ ಸಾರಾ ರೇಜಿಳನ್ನು ಅಪಹರಣಕಾರರು ಕಾರಿನೊಳಕ್ಕೆ ಎಳೆದೊಯ್ದಿದ್ದರು. ಆಕೆಯ ಎಂಟು ವರ್ಷದ ಅಣ್ಣನನ್ನೂ ಅಪಹರಿಸುವ ಯತ್ನ ನಡೆಯಿತಾದರೂ ಆತ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ಆತನಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಈ ಘಟನೆ ನಡೆದಾಗ ಮಕ್ಕಳ ಹೆತ್ತವರಾದ ರೇಜಿ ಜಾನ್ ಮತ್ತು ಸಿಜಿ ಜಾನ್ ಮನೆಯಲ್ಲಿರಲಿಲ್ಲ. ಇಬ್ಬರೂ ವೃತ್ತಿಯಲ್ಲಿ ನರ್ಸ್ ಆಗಿದ್ದಾರೆ.

ಘಟನೆ ನಡೆದ ಮೂರು ಗಂಟೆಗಳ ತರುವಾಯ ಬಾಲಕಿಯ ತಾಯಿಗೆ ಮಹಿಳೆಯೊಬ್ಬಳಿಂದ ಫೋನ್ ಕರೆ ಬಂದು ರೂ. 5 ಲಕ್ಷಕ್ಕೆ ಬೇಡಿಕೆಯಿರಿಸಲಾಗಿತ್ತು. ಮತ್ತೆ ರಾತ್ರಿ 9.30ಕ್ಕೆ ಬಂದ ಕರೆಯಲ್ಲಿ ರೂ.10 ಲಕ್ಷಕ್ಕೆ ಬೇಡಿಕೆ ಇರಿಸಲಾಗಿತ್ತು. ಮಗು ಸುರಕ್ಷಿತವಾಗಿದೆ ಎಂದೂ ಅಪಹರಣಕಾರರು ಹೇಳಿದ್ದಾರೆನ್ನಲಾಗಿದೆ. ಅಪಹೃತ ಮಗುವಿಗಾಗಿ ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಿಳಿ ಬಣ್ಣದ ಕಾರೊಂದು ತಮ್ಮನ್ನು ಕಟ್ಟಾಡಿ ಜಂಕ್ಷನ್‌ನಲ್ಲಿ ಅಡ್ಡಗಟ್ಟಿತ್ತು ಎಂದು ಬಾಲಕಿಯ ಸೋದರ ಹೇಳಿದ್ದಾನೆ. ಕಳೆದೆರಡು ದಿನಗಳಿಂದ ಬಿಳಿ ಸೆಡಾನ್ ಕಾರು ಆ ಪ್ರದೇಶದಲ್ಲಿ ಸಂಚರಿಸುತ್ತಿತ್ತು ಎಂಬ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ.

ಪೊಲೀಸರು ಮೊದಲ ಫೋನ್ ಕರೆ ಟ್ರ್ಯಾಕ್ ಮಾಡಲಾಗಿದ್ದು, ಕೊಲ್ಲಂನ ಪಾರಿಪ್ಪಲ್ಲಿ ಅಂಗಡಿಯೊಂದರ ಬಳಿಯಿಂದ ಬಂದಿದ್ದು, ಅಪಹರಣಕಾರರು ಕಾರಿಗೆ ನಕಲಿ ನೋಂದಣಿ ಸಂಖ್ಯೆಯನ್ನು ಬಳಸಿರುವುದು ಕಂಡುಬಂದಿದೆ.

- Advertisement -

Related news

error: Content is protected !!