Tuesday, April 22, 2025
spot_imgspot_img
spot_imgspot_img

ಅಸಹಜ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

- Advertisement -
- Advertisement -

ಅಸಹಜ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಜಾಮೀನು ಮಂಜೂರಾಗಿದೆ.

ಸೂರಜ್ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಮಾತ್ರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿತ್ತು.

ಸೂರಜ್ ರೇವಣ್ಣಗೆ ವಿಧಿಸಿರುವ ಷರತ್ತುಗಳೇನು?
ನ್ಯಾಯಾಲಯದಿಂದ ಲಿಖಿತ ಅನುಮತಿಯನ್ನು ಪಡೆದಿರಬೇಕು.
ಅರ್ಜಿದಾರರು ಯಾವುದೇ ರೀತಿಯಲ್ಲಿ ಸಂತ್ರಸ್ತೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸಬಾರದು.
ಅರ್ಜಿದಾರರು I.O ಮುಂದೆ ಹಾಜರಾಗಬೇಕು. ತಿಂಗಳ ಪ್ರತಿ ಎರಡನೇ ಭಾನುವಾರ ಮತ್ತು ಬೆಳಿಗ್ಗೆ 9.00 ರಿಂದ ಸಂಜೆ 5.00 ರವರೆಗೆ ಅವರ ಹಾಜರಾತಿ ಹಾಕುವುದು.
6 ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್​ ಸಲ್ಲಿಸುವವರೆಗೆ (ಯಾವುದು ಮೊದಲು) ಅರ್ಜಿದಾರರು ಇದೇ ರೀತಿಯ ಅಪರಾಧವನ್ನು ಮಾಡಬಾರದು.

ಜೂನ್ 22ರಂದು ಅರಕಲಗೂಡು ಮೂಲದ ಯುವಕ ಹಾಗೂ ಜೂನ್ 25ರಂದು ಹೊಳೆನರಸೀಪುರ ಮೂಲದ ಯುವಕ ಸೂರಜ್ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಿಸಲಾಗಿತ್ತು. ಎರಡೂ ಕೇಸ್​ನ ತನಿಖೆ ನಡೆಸಿದ್ದ ಸಿಐಡಿ ಹಾಸನದ ಗನ್ನಿಕಡ ತೋಟದ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದರು. ಸಂತ್ರಸ್ತನನ್ನು ಕರೆ ತಂದು ಸ್ಥಳ ಮಹಜರು ಪೂರ್ಣಗೊಳಿಸಿದ್ದರು.

- Advertisement -

Related news

error: Content is protected !!