Thursday, April 25, 2024
spot_imgspot_img
spot_imgspot_img

ಮಂಗಳೂರು ಎಬಿವಿಪಿ ವತಿಯಿಂದ ಅಭ್ಯಾಸ ವರ್ಗದ ಉದ್ಘಾಟನೆ

- Advertisement -G L Acharya panikkar
- Advertisement -

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಅಭ್ಯಾಸ ವರ್ಗ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ

ಉದ್ಘಾಟನೆಗೊಂಡಿತು.

ಉದ್ಘಾಟನಾ ಕಾರ್ಯಕ್ರಮವನ್ನು ಮೈತ್ರೇಯಿ ಗುರುಕುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಎಸ್ ಆರ್ ರಂಗಮೂರ್ತಿ ನೆರವೇರಿಸಿ “ರಾಷ್ಟ್ರ ಪುನರ್ ನಿರ್ಮಾಣದ ಕಾರ್ಯ ಎಬಿವಿಪಿಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಗೊಳ್ಳುತ ಇತರ ವಿದ್ಯಾರ್ಥಿ ಸಂಘಟನೇಗಳಿಗೆ ಮಾದರಿ ವಿದ್ಯಾರ್ಥಿ ಪರಿಷತ್. ವಿದ್ಯಾರ್ಥಿ ಸಮುದಾಯದಲ್ಲಿ ವಿವೇಕಾನಂದರ ತತ್ವ, ಆದರ್ಶ, ರಾಷ್ಟ್ರೀಯತೆಯನ್ನು ಪಸರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಿಯ ಚಿಂತನೆಯನ್ನು ಬೆಳೆಸುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ನಗರ ಅಧ್ಯಕ್ಷರಾದ ಶ್ರೀಯುತ ಸುಬ್ರಮಣ್ಯ, ಪ್ರಾಂತ ಕಾರ್ಯ ಸಮಿತಿ ಸದಸ್ಯರಾದ ಡಾ. ರವಿ ಎಂ.ಎನ್ ಹಾಗೂ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಉಪಸ್ಥಿತರಿದ್ದರು.

ಡಿಸೆಂಬರ್ 19 ಮತ್ತು 20 ರಂದು ನಡೆಯಲಿರುವ ಈ ಅಭ್ಯಾಸ ವರ್ಗದಲ್ಲಿ ದಕ್ಷಿಣ ಕನ್ನಡ , ಉಡುಪಿ , ಕೊಡಗು ಜಿಲ್ಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಎಬಿವಿಪಿ ಯ ಸೈದ್ಧಾಂತಿಕ ಭೂಮಿಕೆ, ಕಾರ್ಯಪದ್ದತಿ , ಕ್ಯಾಂಪಸ್ ಕಾರ್ಯ , ಪ್ರಶಿಕ್ಷಣ ಮುಂತಾದ ಅವಧಿಗಳು ನಡೆಯಲಿದ್ದು ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಸ್ಥರ ದ ಪ್ರಮುಖರು ಮಾರ್ಗದರ್ಶನ ಮಾಡಲಿದ್ದಾರೆ.

ಶನಿವಾರದಂದು ಸಂಜೆ 7:00 ಗಂಟೆಗೆ ‘ಶ್ರೀರಾಮ : ಸಾಮಾಜಿಕ ಮೌಲ್ಯ’ ಎಂಬ ವಿಷಯದ ಬಗ್ಗೆ ಎಬಿವಿಪಿ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರ ಇವರು ವಿಶೇಷ ಭಾಷಣ ಮಾಡಲಿದ್ದಾರೆ.

- Advertisement -

Related news

error: Content is protected !!