Tuesday, July 28, 2026
spot_imgspot_img
spot_imgspot_img

ಪುತ್ತೂರು : ನೆಹರುನಗರದಲ್ಲಿ ರಿಕ್ಷಾ ಬಸ್‌ ನಡುವೆ ಅಪಘಾತ : ಇಬ್ಬರು ಮೃತ್ಯು

- Advertisement -
- Advertisement -

ಪುತ್ತೂರು : ನಗರದ ನೆಹರುನಗರದಲ್ಲಿ ರಿಕ್ಷಾ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕುಂಬ್ರ ಸಮೀಪದ ಗಟ್ಟಮನೆ ನಿವಾಸಿ ಜಮೀಲಾ ಮತ್ತು ಅವರ ಮೊಮ್ಮಗ ನಾಲ್ಕುವರೆ ವರ್ಷದ ತಮೀ‌ರ್ ಎಂದು ಗುರುತಿಸಲಾಗಿದೆ.

ಅಟೋರಿಕ್ಷಾ ಚಾಲಕ ಬಶೀರ್ ಮತ್ತು ಮೂರು ವರ್ಷ ವಯಸ್ಸಿನ ಝಾಹೀದ್ ಹಾಗೂ ಬಲ್ಮೀಸ್ ಅವರಿಗೆ ಗಾಯಗಳಾಗಿದ್ದು ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ . ದಾಖಲಿಸಲಾಗಿದೆ. ಮೃತಪಟ್ಟ ಜಮೀಲಾ ಅಟೋರಿಕ್ಷಾ ಚಾಲಕ ಬಶೀರ್ ಅವರ ಅತ್ತೆ ಮತ್ತು ಅವರ ನಾಲ್ಕುವರೆ ವರ್ಷದ ತಮೀರ್ ಅಟೋರಿಕ್ಷಾ ಚಾಲಕ ಬಶೀರ್ ಅವರ ಮಗ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!