Monday, July 20, 2026
spot_imgspot_img
spot_imgspot_img

ಉಪ್ಪಿನಂಗಡಿ: ಪೆಟ್ರೋಲ್‌ ಬಂಕ್‌ನಲ್ಲಿ ಏಣಿಗೆ ಕಾರು ಡಿಕ್ಕಿ

- Advertisement -
- Advertisement -

ಉಪ್ಪಿನಂಗಡಿ: ನೆಲ್ಯಾಡಿಯ ಎಚ್‌ಪಿ ಪೆಟ್ರೋಲ್‌ ಬಂಕ್‌ನಲ್ಲಿ ಏಣಿ ಹತ್ತಿ ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಏಣಿಗೆ ಕಾರು ಡಿಕ್ಕಿಯಾಗಿ ಕಾರ್ಮಿಕ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.ಗಾಯಗೊಂಡವರು ಬಜತ್ತೂರು ನಿವಾಸಿ ಹರ್ಷಿತ್ ಕುಮಾರ್ (27) ಎಂದು ತಿಳಿದು ಬಂದಿದೆ.

ಹರ್ಷಿತ್ ಕುಮಾ‌ರ್ ಹಾಗೂ ಚೇತನ್ ಎಂಬವರು ಪೆಟ್ರೋಲ್ ಬಂಕ್‌ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಈ ಪೈಕಿ ಹರ್ಷಿತ್ ಕುಮಾರ್ ಏಣಿ ಹತ್ತಿ ಗೋಡೆಗೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಪೆಟ್ರೋಲ್ ಹಾಕಲು ಬಂದ ಕಾರು ಏಣಿಗೆ ಡಿಕ್ಕಿಯಾಗಿದೆ ಎಂದು‌‌‌ ತಿಳಿದು ಬಂದಿದೆ.

- Advertisement -

Related news

error: Content is protected !!