Tuesday, July 23, 2024
spot_imgspot_img
spot_imgspot_img

ಪಡುಬಿದ್ರಿ: ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕಾರುಗಳು

- Advertisement -G L Acharya panikkar
- Advertisement -

ಪಡುಬಿದ್ರಿ: ಒವರ್ ಟೇಕ್ ಭರಾಟೆಯಿಂದ ಮುನ್ನುಗ್ಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ಪಡುಬಿದ್ರಿಯ ಅಲಂಗಾರು ಬಳಿ ನಡೆದಿದೆ.

ಕೋಟ ಮೂಲದ ಶಿಪ್ಟ್ ಕಾರು ಹಾಗೂ ಕುಂದಾಪುರ ಮೂಲದ ಐ ಟೆನ್ ಕಾರು ಅಪಘಾತಕ್ಕೆ ತುತ್ತಾಗಿದ್ದು, ಎರಡೂ ಕಾರುಗಳಲ್ಲೂ ಚಾಲಕರು ಮಾತ್ರ ಇದ್ದು ಶಿಪ್ಟ್ ಕಾರಿನ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಭಾಗದಲ್ಲಿ ಹೆದ್ದಾರಿ ಬಹಳ ಅಪಾಯಕಾರಿ ತಿರುವು ಹೊಂದಿದ್ದು, ರಸ್ತೆ ಚತುಷ್ಪಥಗೊಳ್ಳುವ ಸಂದರ್ಭದಲ್ಲೂ ಹೆದ್ದಾರಿ ನೇರಗೊಳಿಸುವ ಪ್ರಕ್ರಿಯೆ ನಡೆಸದ ಕಾರಣ ಈಗಲೂ ಆ ತಿರುವು ಬಹಳಷ್ಟು ಅಪಘಾತಗಳಿಗೆ ನಾಂದಿಯಾಗುತ್ತಿದೆ. ಈ ಭಾಗದಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಪಕ್ಕದ ಗದ್ದೆಗೆ ಉರುಳುತ್ತಿದ್ದರೂ ಹೆದ್ದಾರಿ ಇಲಾಖೆ ತನಗೆ ಸಂಬಂಧವೇ ಇಲ್ಲದಂದೆ ವರ್ತಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪ ವ್ಯಕ್ತಪಡಿಸಿದ್ದಾರೆ. ಹೆಜಮಾಡಿ ಟೋಲ್ ಸಿಬ್ಬಂದಿಗಳು ವಾಹನಗಳ ತೆರವು ಕಾರ್ಯ ನಡೆಸಿದರು. ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿ ವಾಹನಗಳನ್ನು ಠಾಣೆಗೆ ಸಾಗಿಸಿದ್ದಾರೆ.

- Advertisement -

Related news

error: Content is protected !!