- Advertisement -
- Advertisement -



ವಿಟ್ಲ : ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಕಾರು ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮ ಒಕ್ಕೆತ್ತೂರು ಲಯನ್ಸ್ ಕ್ಲಬ್ ಬಳಿ ನಡೆದಿದೆ.
ಕಡಬ ನಿವಾಸಿ ಅಬ್ದುಲ್ ಜಲೀಲ್. ಕೆ ರವರು ದಿನಾಂಕ:07-06-2024 ರಂದು ರಾತ್ರಿ, ತನ್ನ ಬಾಬ್ತು KA-21-Z-4652ನೇ ಕಾರಿನಲ್ಲಿ, ಕಲ್ಲಡ್ಕ ಮೂಲಕ ವಿಟ್ಲ ಕಡೆಗೆ ತೆರಳುವ ಸಂದರ್ಭದಲ್ಲಿ ಒಕ್ಕೆತ್ತೂರು ಲಯನ್ಸ್ ಕ್ಲಬ್ ಬಳಿ ತಿರುವು ರಸ್ತೆಗೆ ತಲುಪಿದಾಗ, ವಿಟ್ಲ ಕಡೆಯಿಂದ ಕೆಎ-70-3280ನೇ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕ ವಿನೋದ್‌ಕುಮಾರ್ ರವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಜಲೀಲ್‌ರವರು ಚಲಾಯಿಸುತ್ತಿದ್ದ ಕಾರಿಗೆ, ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿರುತ್ತದೆ.ಜಲೀಲ್‌ರವರಿಗೆ ಯಾವುದೇ ಗಾಯ ನೋವಾಗಿರುವುದಿಲ್ಲ ಎಂಬುದಾಗಿ ನೀಡಿದ ದೂರಿನ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯಲ್ಲಿ, ಅ.ಕ್ರ 103/2024 ಕಲಂ:279 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








