Saturday, June 13, 2026
spot_imgspot_img
spot_imgspot_img

ಬಂಟ್ವಾಳ: ಸ್ಕೂಟರ್‌ಗೆ ಟಾಟಾ ಎಸ್‌ ವಾಹನ ಡಿಕ್ಕಿ; ತಂದೆ ಮಗಳಿಗೆ ಗಾಯ

- Advertisement -
- Advertisement -

ಬಂಟ್ವಾಳ: ಸ್ಕೂಟರ್‌ಗೆ ಟಾಟಾ ಎಸ್‌ ವಾಹನ ಡಿಕ್ಕಿಯಾಗಿ ಸ್ಕೂಟರ್‌ನಲ್ಲಿದ್ದ ತಂದೆ ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಸಜೀಪಮುನ್ನೂರು ಗ್ರಾಮದ ಕೃಷ್ಣ ಕಾರಂತ ಹಾಗೂ ಅವರ ಮಗಳು ವೈಷ್ಣವಿ ಗಾಯಗೊಂಡವರು. ಮನೆಯಿಂದ ತಂದೆ ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ನಾಗರಪಂಚಮಿಯ ಸೇವೆ ಮಾಡಲು ಇಲ್ಲಿನ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದ ವೇಳೆ ಸಜೀಪ ಮುನ್ನೂರು ಗ್ರಾಮದ ಬೆಂಕ್ಯ ಎಂಬಲ್ಲಿ ಹಿಂಬದಿಯಿಂದ ಬಂದ ಟಾಟ ಏಸ್ ವಾಹನ ಡಿಕ್ಕಿಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಿಂದ ಕೃಷ್ಣ ಕಾರಂತ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರವಾಗಿ ಗಾಯವಾಗಿದೆ. ಜೊತೆಗೆ ವೈಷ್ಣವಿ ಮತ್ತು ಅನನ್ಯ ಇಬ್ಬರು ಮಕ್ಕಳು ಕೂಡ ಇದ್ದು, ವೈಷ್ಣವಿಗೆ ಗಾಯವಾದರೆ ಅನನ್ಯ ಅಲ್ಪಸ್ವಲ್ಪ ಗಾಯಗಳಾಗಿ ಯಾವುದೇ ಅಪಾಯವಿಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಕಾರಂತ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ವೈಷ್ಣವಿಗೆ ಕೂಡ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಸಂಚಾರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Insta: glacharyajewellers
Fb: glacharya
- Advertisement -

Related news

error: Content is protected !!