- Advertisement -
- Advertisement -
ಪುತ್ತೂರು: ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ, ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಜಲ್ಪಡ್ಡು ಬಳಿ ನಡೆದಿದೆ.
ಪುತ್ತೂರಿನಿಂದ ನೆಹರುನಗರ ಕಡೆ ಸಾಗುತ್ತಿದ್ದ ರಿಕ್ಷಾ ಹಾಗೂ ಉರ್ಲಾಂಡಿ ಒಳ ರಸ್ತೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಆಟೋ ಚಾಲಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
- Advertisement -