Saturday, April 20, 2024
spot_imgspot_img
spot_imgspot_img

ಪೆರ್ನೆ ಅಡಿಕೆ ವರ್ತಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣ- ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಬಂಟ್ವಾಳ ತಾಲೂಕಿನ ಪೆರ್ನೆಯ ಆರ್ಶಿವಾದ ಕಟ್ಟಡದಲ್ಲಿ ಅಡಿಕೆ ಖರೀದಿ ಅಂಗಡಿಯನ್ನು ನಡೆಸುತ್ತಿದ್ದು ದೀಪಕ್ ಜಿ ಶೆಟ್ಟಿ ಎಂಬವರು, ತನ್ನ ಮನೆಯ ಅಡಿಕೆ ಮಾರಾಟ ಮಾಡಿದ ರೂ. 3.50 ಲಕ್ಷ ಹಣವನ್ನು ಸಂಜೆ ಅಂಗಡಿಯನ್ನು ಬಂದ್ ಮಾಡಿ ತನ್ನ ತನ್ನ ಪದೆಬರಿ ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಂತೆ ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನದಲ್ಲಿ ಸುಮಾರು 21 ರಿಂದ 25 ವರ್ಷ ಪ್ರಾಯದ ಅಪರಿಚಿತರು ವಾಹನದಿಂದ ಇಳಿದು ದೀಪಕ್ ಶೆಟ್ಟಿಯವನರನ್ನು ತಡೆದು ಮಲೆಯಾಳಿ ಭಾಷೆಯಲ್ಲಿ “ ಕುತ್ತುರಾ ಕುತ್ತುರಾ “ ಎಂದು ಹೇಳುತ್ತಾ ಬೈಕ್ ನ ಸಹ ಸವಾರ ದೀಪಕ್ ಶೆಟ್ಟಿ ರವರ ಬಲ ಭಾಗದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು ಮೋಟಾರ್ ಸೈಕಲ್ ನ ಚೀಲದಲ್ಲಿದ್ದ ಹಣವನ್ನು ದರೋಡೆಗೈದಿದ್ದರು.

ಪ್ರಮುಖ ಅರೋಪಿಗಳಾದ ಸಜಿಪ ಮಿತ್ತಪದವು ನಿವಾಸಿ ಅಪ್ರೀದ್ (22), ಸೋಮವಾರ ಪೇಟೆ ದೊಡ್ಡಹನಕೊಡು ಗ್ರಾಮದ ಕಾಗಡಿಕಟ್ಟೆ ನಿವಾಸಿ ಜುರೈಝ್(20) ಮತ್ತು ಕಡೆಶಿವಾಲಯ ಗ್ರಾಮದ ನಿವಾಸಿ ಮೊಹಮ್ಮದ್ ತಂಝಿಲ್ (22) ಬಂಧಿತ ಆರೋಪಿಗಳು.

ಆರೋಪಿಗಳಿಂದ ಗ್ರೇ ಬಣ್ಣದ ಆಕ್ಟಿವಾ, ಕೃತ್ಯಕ್ಕೆ ಬಳಸಿದ ಚೂರಿ-1 , ಅರೋಪಿಗಳ ವಶದಲ್ಲಿದ್ದ 3 ಮೊಬೈಲ್ ಸುಲಿಗೆ ಮಾಡಿದ ನಗದು ನ್ನು ವಶಪಡಿಸಿಕೊಂಡಿದ್ದು ಇನ್ನಿಬ್ಬರು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದಕ ಜಿಲ್ಲಾ ಪೊಲೀಸ್ ಆಧೀಕ್ಷಕರರವರ ಅದೇಶದಂತೆ ಪೊಲೀಸ್ ಸಹಾಯಕ ಅಧೀಕ್ಷಕರು , ಪುತ್ತೂರು ಉಪ-ವಿಭಾಗ ರವರ ನಿರ್ದೇಶನದಂತೆ ಎಎಸ್ಪಿ ರೋಹನ್ ಜಗದೀಶ್, ಉಪ್ಪಿನಂಗಡಿ ಠಾಣೆ ಎಸೈ ಉಮೇಶ್ ಉಪ್ಪಳಿಕೆ, ಗ್ರಾಮಾಂತರ ಸಿಪಿಐ ರವರ ನೇತೃತ್ವದ ವಿಶೇಷ ಅಪರಾಧ ಪತ್ತೆ ಹಾಗೂ ತಂಡದಲ್ಲಿ ಎಸೈ ಈರಯ್ಯ , ಎ.ಎಸ್.ಐ ಗಳಾದ ಚೋಮ , ಜನಾರ್ಧನ, ಸಿಬ್ಬಂದಿಗಳಾದ ಹರೀಶ್ಷಂದ್ರ, ಶೇಖರ್, ಹರೀಶ, ಬಾಲಕೃಷ್ಣ, ಹಿತೋಷ , ಕುಶಾಲಪ್ಪ ಪಿಸಿ . ಇರ್ಷಾದ್ ಪಡಂಗಡಿ, ಪ್ರತಾಪ್, ಚಂದ್ರಶೇಖರ , ವಿನಾಯಕ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ದರ್ಣಪ್ಪ, ಅಬ್ದುಲ್ ಸಲೀಂ, ಶಿವರಾಮ ಪಿಸಿ ಜಗದೀಶ್ ಅತ್ತಾಜೆ , ಜಿಲ್ಲಾ ಗಣಕ ಯಂತ್ರ ವಿಭಾಗದ ದಿವಾಕರ, ಸಂಪತ್, ಬಂಟ್ವಾಳ ಸಂಚಾರ ಠಾಣಾ ಹೆಚ್.ಸಿ ದೇವದಾಸ್ ಹಾಗೂ ಇಲಾಖಾ ವಾಹನ ಚಾಲಕರಾದ ಬಂದೆನವಾಜ್ ಬುಡ್ಕಿ, ಕನಕರಾಜ್ , ರಂಜಿತ್ ರವರು ಈ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

- Advertisement -

Related news

error: Content is protected !!