Sunday, June 21, 2026
spot_imgspot_img
spot_imgspot_img

ದೃಷ್ಟಿಹೀನ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ; ಯೂಟ್ಯೂಬರ್‌ನ ಬಂಧನ

- Advertisement -
- Advertisement -
vtv vitla

ದೃಷ್ಟಿಹೀನ ಅಪ್ರಾಪ್ತಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಯೂಟ್ಯೂಬರ್ ಓರ್ವನನ್ನು ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ. ಕೊಟ್ಟಾಯಂ ಮೂಲದ ಜೀಮೋನ್ ಬಂಧಿತ ಆರೋಪಿ.

ಬಾಲಕಿ ಸಂಗೀತದಲ್ಲಿ ಆಸಕ್ತಿ ಹೊಂದಿದ್ದು , ಆಕೆಯ ಹಾಡುಗಳನ್ನು ವಿಡಿಯೋ ಚಿತ್ರೀಕರಣ ಮಾಡುವ ನೆಪದಲ್ಲಿ ಜೀಮನ್ ಬಾಲಕಿಯನ್ನು ಎರ್ನಾಕುಲಂನ ಚೆರೈನಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಬಳಿಕ ಚಿತ್ರೀಕರಣದ ನೆಪದಲ್ಲಿ ಜೀಮನ್ ಬಾಲಕಿಯನ್ನು ಚೇರಾ ಬಳಿಗೆ ಕರೆತಂದಿದ್ದ.

ಬಾಲಕಿಯೊಂದಿಗೆ ಆಕೆಯ ತಾಯಿ ಮತ್ತು ಸಹೋದರ ಇದ್ದರು. ಹೊಟೇಲ್ ಕೊಠಡಿಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಎರ್ನಾಕುಲಂ ಪೊಲೀಸರು ಜೀಮನ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಬಂಧನ ನಡೆದಿದೆ.

- Advertisement -

Related news

error: Content is protected !!