Thursday, June 4, 2026
spot_imgspot_img
spot_imgspot_img

ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆ್ಯಸಿಡ್ ದಾಳಿ..!

- Advertisement -
- Advertisement -

ಪಕ್ಕದ ಮನೆಯ ನಾಯಿ ಬೊಗಳಿದ್ದಕ್ಕೆ ಶ್ವಾನದ ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ.

ಶ್ವಾನದ ಮಾಲೀಕನ ಸುಂದರ್ ರಾಜ್ ಹಾಗೂ ಆ್ಯಸಿಡ್ ಎರಚಿದ ವ್ಯಕ್ತಿ ಜೇಮ್ಸ್ ಎಂದು ಗುರುತಿಸಲಾಗಿದೆ

ಸುಂದರ್ ರಾಜ್ ತಾನು ಸಾಕಿದ ನಾಯಿ ಬೊಗಳಿದ್ದಕ್ಕೆ ಶ್ವಾನಕ್ಕೆ ಬೈಯುತ್ತಿದ್ದನು. ಪಕ್ಕದ ಮನೆಯ ಜೇಮ್ಸ್​ ನನಗೆ ಬೈಯುತ್ತಿದ್ದಾನೆ ಎಂದು ತಿಳಿದು ಸುಂದರ್​​ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ಸದ್ಯ ಆ್ಯಸಿಡ್​ ದಾಳಿಗೊಳಗಾದ ಸುಂದರ್​ ರಾಜ್ ಶಿವಮೊಗ್ಗದ ಮೆಗ್ಹಾನ್ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಎಡಗಣ್ಣಿಗೆ ಗಂಭೀರ ಗಾಯವಾಗಿದ್ದು, ಕಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.

ಅತ್ತ ಜೇಮ್ಸ್​ ಕೂಡ ನಾಯಿ ಹೆಸರಿನಲ್ಲಿ ನನಗೆ ಬೈಯುತ್ತಿರುವ ಆರೋಪ ಮಾಡಿದ್ದಾನೆ. ಈ ಕಾರಣಕ್ಕೆ ಸಿಟ್ಟಿನಿಂದ ಜೇಮ್ಸ್​ ಆತನ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಸದ್ಯ ಜೇಮ್ಸ್ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!