Thursday, June 18, 2026
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶಮಂತ್​ ಗೌಡ

- Advertisement -
- Advertisement -

ಕನ್ನಡ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್​ ಖ್ಯಾತಿಯ ಶಮಂತ್ ಬ್ರೋ ಗೌಡ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮೇಘನಾ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಪ್ರೀತಿಸಿದ ಹುಡುಗಿ ಮೇಘನಾಗೆ ಖುಷಿ ಖುಷಿಯಾಗಿ ಶಮಂತ್ ತಾಳಿ ಕಟ್ಟುತ್ತಿರುವ ಫೋಟೋ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

- Advertisement -

Related news

error: Content is protected !!