Monday, June 15, 2026
spot_imgspot_img
spot_imgspot_img

ಕೊರೊನಾ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದ ಖ್ಯಾತ ನಟಿ ನಗ್ಮಾಗೆ ಕೊರೊನಾ ಪಾಸಿಟಿವ್!

- Advertisement -
- Advertisement -

ಮುಂಬೈ: ಕೊರೋನಾ ಲಸಿಕೆ ಮೊದಲ ಡೋಸ್ ಪಡೆದುಕೊಂಡಿದ್ದ ಭಾರತೀಯ ಚಿತ್ರರಂಗದ ಖ್ಯಾತ ನಟಿ, ರಾಜಕಾರಣಿ ನಗ್ಮಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಅವರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಗ್ಮಾ ಕೆಲವು ದಿನಗಳ ಹಿಂದೆ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದೆ. ಈಗ ಕೋವಿಡ್-19 ಪರೀಕ್ಷಿಸಲಾಗಿದ್ದು, ನನಗೆ ಕೊರೋನಾ ಪಾಸಿಟಿವ್ ಬಂದಿದೆ. ಹೋಮ್ ಕ್ವಾರಂಟೈನ್ ನಲ್ಲಿ ಇರುವುದಾಗಿ ಅವರು ತಿಳಿಸಿದ್ದಾರೆ.

ಲಸಿಕೆ ಪಡೆದುಕೊಂಡ ನಂತರವೂ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ. ನಿಯಮ ಪಾಲಿಸಿ ಎಂದು ಅವರು ಹೇಳಿದ್ದಾರೆ. ನಗ್ಮಾ ಅವರು ತೆಲುಗು, ತಮಿಳು, ಭೊಜ್ ಪುರಿ, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ.

- Advertisement -

Related news

error: Content is protected !!