Wednesday, June 17, 2026
spot_imgspot_img
spot_imgspot_img

ಆಡಂ ಪಾಷಾನಿಗೆ ಜೈಲಲ್ಲಿ ರಾಗಿಣಿ ಸೆಲ್ ಬೇಕಂತೆ

- Advertisement -
- Advertisement -

ಬೆಂಗಳೂರು: ಜೈಲು ಸೇರಿದ್ರು ಸ್ಯಾಂಡಲ್ ವುಡ್ ಮಾಡೆಲ್ ಹಾಗೂ ನಟ ಆಡಂ ಪಾಷಾ ನಖರಾ ನಿಂತಿಲ್ಲ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಆಡಂ ಪಾಷಾನನ್ನು ಯಾವ ಸೆಲ್ ನಲ್ಲಿ ಇರಿಸಬೇಕೆಂಬ ಚರ್ಚೆಯ ಬಳಿಕ ಕೊನೆಗೆ ಪುರುಷನೂ ಅಲ್ಲ, ಮಹಿಳೆಯೂ ಅಲ್ಲ ಎಂಬ ತೀರ್ಮಾನದ ಮೇಲೆ ವಿಶೇಷ ಸೆಲ್ ನಲ್ಲಿ ಇರಿಸಲಾಗಿತ್ತು. ಆದರೆ ಈಗ ಆಡಂ ತನ್ನನ್ನು ರಾಗಿಣಿ ಸೆಲ್ ನಲ್ಲಿ ಇರಿಸಬೇಕೆಂದು ಆಡಂ ಪಟ್ಟು ಹಿಡಿದಿದ್ದಾನೆ.


ನ್ಯಾಯಾಲಯದ ವಾರೆಂಟ್ ಪ್ರಕಾರ ಪುರುಷ ಅಂತಿರೋ ಆಡಂನನ್ನು ಆತ ಜೈಲಿಗೆ ಬಂದಾಗ ಯಾವ ಸೆಲ್ ನಲ್ಲಿ ಇರಿಸಬೇಕೆಂಬ ಚರ್ಚೆ ನಡೆದಿತ್ತು. ಮಹಿಳೆಯರಂತೆ ಬಟ್ಟೆ ಧರಿಸೋ ಆತನನ್ನು ಪುರುಷರ ಸೆಲ್ ನಲ್ಲಿ ಇಡೋಕೆ ಜೈಲಾಧಿಕಾರಿಗಳು ಸಿದ್ಧರಿರಲಿಲ್ಲ. ಆದರೆ ನಾನು ಹೆಣ್ಣಲ್ಲ. ಲಿಂಗ ಬದಲಾವಣೆ ಮಾಡಿಕೊಂಡಿಲ್ಲ ಎಂದಿದ್ದರಿಂದ ಆತನನ್ನು ಮಹಿಳೆಯರ ಸೆಲ್ ನಲ್ಲಿ ಇಡೋಕೆ ಅಧಿಕಾರಿಗಳಿಗೆ ಧೈರ್ಯವಿರಲಿಲ್ಲ.

ಇತರ ವಿಚಾರಣಾಧೀನ ಖೈದಿಗಳಿಗೆ ಹಾಗೂ ಅಧಿಕಾರಿಗಳಿಗೆ ಕಿರಿ ಕಿರಿ ಮಾಡ್ತಿರೋ ಆಡಂ ನನ್ನನ್ನು ರಾಗಿಣಿ ಸೆಲ್ ಗೆ ಹಾಕಿ ನಾನು ಪುರುಷರ ಸೆಲ್ ನಲ್ಲಿ ಇರೋದಿಕ್ಕೆ ಆಗಲ್ಲ ಅಂತ ಗಲಾಟೆ ಮಾಡ್ತಿದ್ದಾನೆ. ಈತನ ಕಿರಿ-ಕಿರಿಯಿಂದ ಕಂಗೆಟ್ಟ ಅಧಿಕಾರಿಗಳು ಆತನನ್ನು ಸುಧಾರಿಸುವ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿಲ್ಲ.

ಆಡಂನ ಈ ಹುಚ್ಚಾಟದಿಂದ ಬೇಸತ್ತ ಅಧಿಕಾರಿಗಳು ಈಗ ಆತನನ್ನು ಜೈಲಿನಲ್ಲಿರೋ ಹಾಸ್ಪಿಟಲ್ ನ ಪ್ರತ್ಯೇಕ ವಾರ್ಡ್ ಗೆ ಆತನನ್ನು ಶಿಫ್ಟ್ ಮಾಡಿದ್ದಾರೆ. ಆದರೂ ಇನ್ನು ತನ್ನನ್ನು ರಾಗಿಣಿ ಸೆಲ್ ಗೆ ಹಾಕಿ ಅಂತ ವರಾತ ತೆಗೆಯೋದನ್ನು ಮಾತ್ರ ಆಡಂ ನಿಲ್ಲಿಸಿಲ್ಲವಂತೆ. ಡ್ರಗ್ಸ್ ಸಪ್ಲೈ ಮಾಡಿದ ಆರೋಪದಡಿ ಜೈಲು ಸೇರಿರುವ ಆರೋಪಿ ಅನಿಕಾ ಜೊತೆ ನೇರ ಸಂಪರ್ಕಹೊಂದಿದ ಹಾಗೂ ಡ್ರಗ್ಸ್ ಖರೀದಿಸಿದ ಆರೋಪದ ಮೇರೆಗೆ ಆಡಂನನ್ನು ವಿಚಾರಣೆಗೆ ಕರೆದಿದ್ದ ಸಿಸಿಬಿ ಅಧಿಕಾರಿಗಳು ಬಳಿಕ ಬಂಧಿಸಿದ್ದರು.

- Advertisement -

Related news

error: Content is protected !!