- Advertisement -
- Advertisement -
ಮಂಗಳೂರು:-ಮಂಗಳೂರಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯನ ಕೊಲೆ.! ಮಂಗಳೂರು ಹೊರವಲಯದ ಅಡ್ಯಾರ್ ಪದವು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
![](https://vtvvitla.com/wp-content/uploads/2020/07/IMG-20200711-WA0002-473x1024.jpg)
ಘಟನೆಯಲ್ಲಿ ಸ್ಥಳೀಯ ನಿವಾಸಿ ಶಾಕೀರ್ ಎಂಬಾತನಿಂದ ಅಡ್ಯಾರ್ ನಿವಾಸಿ ಯಾಕೂಬ್(45)ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ವೇಳೆ ಯಾಕುಬ್ ಮತ್ತು ಇನ್ನೊಂದು ತಂಡ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆಸಿದ್ದಾರೆ. ಇಬ್ಬರ ಮಧ್ಯೆ ಕ್ಷುಲ್ಲಕ್ಕ ಕಾರಣಕ್ಕೆ ಜಗಳ ನಡೆದು ಯಾಕೂಬ್ ಮೇಲೆ ಕೈನಿಂದ ಹಲ್ಲೆಯಾಗಿದೆ.
![](https://vtvvitla.com/wp-content/uploads/2020/07/a-6.jpg)
![](https://vtvvitla.com/wp-content/uploads/2020/07/IMG-20200711-WA0004-512x1024.jpg)
ಹಾಗೂ ನೆಲಕ್ಕೆ ದೂಡಿ ಹಾಕಿ ಎದೆಗೆ ಒದ್ದ ಪರಿಣಾಮ ಯಾಕೂಬ್ ಸಾವು ಆಗಿದೆ ಎಂದು ಹೇಳಲಾಗುತ್ತದೆ.ಕೊಲೆ ನಡೆಸಿದ ಆರೋಪ ಗಳಿಗಾಗಿ ತನಿಖೆ ಮುಂದುವರೆದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
![](https://vtvvitla.com/wp-content/uploads/2020/07/VTV-400X300-pIXEL-7.jpg)
- Advertisement -