Saturday, April 27, 2024
spot_imgspot_img
spot_imgspot_img

ಕೊರೊನಾ ಸಂಕಷ್ಟದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿ ವಿದೇಶ ಪ್ರವಾಸ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸಂಕಷ್ಟದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಮಾರ್ಚ್​ 26ಕ್ಕೆ ನೆರೆಯ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.

1971ರಲ್ಲಿ ಸ್ವಾತಂತ್ರ್ಯ ಪಡೆದ ಬಾಂಗ್ಲಾದೇಶ ಮಾರ್ಚ್​​ 26ಕ್ಕೆ 50ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಗೋಲ್ಡನ್​​ ಜುಬ್ಲಿ ಆಚರಣೆಯ ವಿಶೇಷವಾಗಿ ಮೋದಿ ಭೇಟಿ ನೀಡಲಿದ್ದಾರೆ. ಮೋದಿ ಅವರ ಎರಡು ದಿನಗಳ ಈ ಭೇಟಿ ಬರೋಬ್ಬರಿ 15 ತಿಂಗಳ ಬಳಿಕ ಕೈಗೊಳ್ಳುತ್ತಿರುವ ವಿದೇಶ ಪ್ರವಾಸವಾಗಿದೆ.

2019 ನವೆಂಬರ್​​ನಲ್ಲಿ ಮೋದಿ ತಮ್ಮ ಕೊನೆಯ ವಿದೇಶ ಪ್ರವಾಸ ಕೈಗೊಂಡಿದ್ದರು. ಕಳೆದ ವರ್ಷ ಕೊರೊನಾ ಕಾರಣದಿಂದ ಮೋದಿ ಯಾವುದೇ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಸದ್ಯ ಬಾಂಗ್ಲಾ ಪ್ರಧಾನಿ ಶೇಖ್​ ಹಸೀನಾ ಅವರು ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೋದಿ ಬಾಂಗ್ಲಾ ಭೇಟಿ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್​​. ಜೈಶಂಕರ್​ ಅವರು ಕಳೆದ ವಾರವೇ ಬಾಂಗ್ಲಾ ರಾಜಧಾನಿ ಡಾಕಾಗೆ ಭೇಟಿ ನೀಡಿದ್ದರು.

- Advertisement -

Related news

error: Content is protected !!