


ಅಳಿಕೆ: ಶ್ರೀ ಸತ್ಯ ಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆ, ಆಳಿಕೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ NEET (UG), JEE, KCET ಮತ್ತು CLAT 2026ರ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ದೇಶಭಕ್ತಿಯ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು SSSLS ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕೆ. ಎಸ್. ಕೃಷ್ಣ ಭಟ್ ಅವರು ನೆರವೇರಿಸಿದರು.
ಕರ್ನಾಟಕ ಕೇಡರ್ IPS ಅಧಿಕಾರಿ ತರಬೇತಿದಾರ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸೂರಜ್ ಕೆ. ಎಲ್. ಮಾತನಾಡಿ, ಅವರು ಆಳಿಕೆಯ ವಿಶಿಷ್ಟ ಶಿಕ್ಷಣ ಪದ್ಧತಿಯನ್ನು ವಿವರಿಸಿ, ಯಶಸ್ಸಿಗೆ 90% ಪರಿಶ್ರಮ, 5% ಅದೃಷ್ಟ ಮತ್ತು 5% ಭಗವಂತನ ಅನುಗ್ರಹ ಅಗತ್ಯವೆಂದು ತಿಳಿಸಿದರು.
ಡಾ. ವಿಕ್ರಮ್ ಶೆಟ್ಟಿ, ವಿದ್ಯಾರ್ಥಿಗಳು “I” ಯಿಂದ “We” ಕಡೆಗೆ ಸಾಗಬೇಕು ಹಾಗೂ ಆಳಿಕೆಯ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣದ ಮಹತ್ವವನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಮಾಜಿ ಭಾರತೀಯ ಸೇನಾ ಅಧಿಕಾರಿ ಕರ್ನಲ್ ಬಸವರಾಜ್ ಎಸ್. ಘಿವಾರಿ ಅವರು, ಸಶಸ್ತ್ರ ಪಡೆಗಳ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಿ, ದೈಹಿಕ ಕ್ಷಮತೆ, ಓದುವ ಅಭ್ಯಾಸ ಹಾಗೂ ಏಕಾಗ್ರತೆಯ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ SSSLS ಟ್ರಸ್ಟ್‌ನ ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್ ಅವರು, ಹಿರಿಯರ ತ್ಯಾಗಗಳನ್ನು ಸ್ಮರಿಸಿ, ಯುವಜನತೆ ದೇಶಕ್ಕೆ ಕೊಡುಗೆ ನೀಡಬೇಕು, ಪೋಷಕರನ್ನು ಗೌರವಿಸಬೇಕು ಹಾಗೂ ಮಾತೃಭೂಮಿಯನ್ನು ಆದರಿಸಬೇಕು ಎಂದು ಕರೆ ನೀಡಿದರು.
ಸನ್ಮಾನಿಸಲ್ಪಟ್ಟ ವಿದ್ಯಾರ್ಥಿಗಳ ಪರವಾಗಿ ಪ್ರೇಮ್ ಸಾಗರ್ ಕೃತಜ್ಞತೆ ಸಲ್ಲಿಸಿದರು. ವಿದ್ಯಾಕೇಂದ್ರದ ಪ್ರಾಂಶುಪಾಲ ಶಿವಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಸಾಧಕ ವಿದ್ಯಾರ್ಥಿ ಪ್ರೇಮ್ ಸಾಗರ್ ಅವರ ತಾಯಿ ಪೋಷಕರ ಪರವಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಪಿಯುಸಿ ವಿಭಾಗದ ಪ್ರಾಂಶುಪಾಲ ರಾಮಕೃಷ್ಣ ಪೈ ವಂದಿಸಿದರು.
ಅಕಾಡೆಮಿಕ್ ಡೈರೆಕ್ಟರ್ ಹರಿಪ್ರಸಾದ್ ವಿ. ಎನ್., ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಳಿಕ ಪಿಯುಸಿ ಹಾಗೂ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.








