Thursday, May 2, 2024
spot_imgspot_img
spot_imgspot_img

ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಯು ಗಂಗಾಧರ ಭಟ್ ನಿಧನ.

- Advertisement -G L Acharya panikkar
- Advertisement -

ವಿಟ್ಲ: ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಯು ಗಂಗಾಧರ ಭಟ್ ಅವರು ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಗಂಗಾಧರ ಭಟ್ (90) ಅವರು ಮಡಿಯಾಲ ನಾರಾಯಣ ಭಟ್ ಅವರ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರು. ತ್ಯಾಗ ಜೀವಿಯಾಗಿದ್ದ ಅವರು 1977 ರಿಂದ ಇಲ್ಲಿಯ ತನಕ ಸುಮಾರು 43 ವರ್ಷಗಳ ಕಾಲ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅಳಿಕೆ ವಿದ್ಯಾಸಂಸ್ಥೆಗೆ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿ, ಹಾಸ್ಟೆಲ್​​​​ನಲ್ಲಿದ್ದು ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿ ಇಂದು ದೇಶ, ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಅಳಿಕೆ ಪಿಯು ಕಾಲೇಜು ಶಿಕ್ಷಣದ ಜೊತೆಗೆ ಆಧ್ಯಾತ್ಮವನ್ನು ಕಲಿಸುವ ಸಂಸ್ಥೆಯಾಗಿದ್ದು, ಗಂಗಾಧರ ಭಟ್ ಅವರ ಕೊಡುಗೆ ಅಪಾರ.

- Advertisement -

Related news

error: Content is protected !!