ಸರಕಾರಿ ಭೂಮಿಯಲ್ಲಿ ಹಕ್ಕನ್ನು ಕೇಳುತ್ತಿರುವುದು-ಅವರಪ್ಪನ ಮನೆಯಿಂದ ತಂದು ಜಾಗ ಕೊಡುವುದಲ್ಲ…!
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ದ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ವಾಗ್ದಾಳಿ





ಪುಣಚ ಗ್ರಾಮದ ಪರಿಶಿಷ್ಟ ಪಂಗಡದ ಹಲವು ಕುಟುಂಬಗಳಿಗೆ ಹಕ್ಕುಪತ್ರ ನೀಡದೆ ವಂಚಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಬಡಜನ ವಿರೋಧಿ ನೀತಿಯನ್ನು ಖಂಡಿಸಿ ಬಂಟ್ವಾಳ ಮಿನಿವಿಧಾನಸೌಧ ಎದುರು ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ವತಿಯಿಂದ ಆರಂಭವಾದ ಈ ಹೋರಾಟಕ್ಕೆ ಪುತ್ತೂರು ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಇಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ನಮ್ಮ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಜಿಲ್ಲಾ ಪದಾಧಿಕಾರಿಗಳ ನಿಯೋಗ ಸಾಥ್ ನೀಡಿದ್ದು, ಈ ದಲಿತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಪುತ್ತೂರು ಬಿಜೆಪಿಯ ಕಾರ್ಯಕರ್ತರು, ಬಂಟ್ವಾಳ ಬಿಜೆಪಿಯ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಮಗೆ ಅರ್ಹವಾಗಿ ದೊರಕಬೇಕಿದ್ದ ಹಕ್ಕು ಪತ್ರವನ್ನು ಒದಗಿಸಿ ಎಂದು ಒತ್ತಾಯಿಸಿ ಪುಣಚದ ಮೂರು ಕುಟುಂಬಗಳು ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಸೋಮವಾರದಿಂದೀಚೆಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮಂಗಳವಾರ ಬೆಳಗ್ಗೆ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಮತ್ತು ಬಂಟ್ವಾಳ ಕ್ಷೇತ್ರಗಳ ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದರು.
ಪುತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ 3ನೇ ವಾರ್ಡ್‌ನ ದೇವಿನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಕಳೆದ ಹಲವು ವರ್ಷ ಗಳಿಂದ ವಾಸದ ಮನೆಗೆ ಹಕ್ಕುಪತ್ರ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಮೂರು ಮನೆಗಳ ಸದಸ್ಯರು, ಸಂಬಂಧಿಕರು ಮೌನ ಪ್ರತಿಭಟನೆ ಆರಂಭಿಸಿದ್ದರು.
ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದಬೇಬು ಕುಮಾರಿ, ವಿಜಯಲಕ್ಷ್ಮಿ, ಪ್ರೇಮ ಅವರು ಹಾಗೂ ಮನೆ ಮಂದಿ ಸೇರಿ ಸುಮಾರು 15 ಮಂದಿ ಅಹೋರಾತ್ರಿ ಪ್ರತಿಭಟನೆ ನಡೆಸು ತ್ತಿದ್ದರು. ನೇತೃತ್ವ ವಹಿಸಿದ್ದ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷಗಿರಿಧರ್ ನಾಯ್ಕಮಾತನಾಡಿ, ಪುಣಚ ಗ್ರಾಮದ ದೇವಿನಗರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ 13 ವಾಸದ ಮನೆಗಳಿವೆ. ಈ ಪೈಕಿ 5 ಮನೆ ಯವರಿಗೆ ಮನೆ ಕಟ್ಟಿ 8 ವರ್ಷವಾದರೂ ಈವರೆಗೆ ಹಕ್ಕುಪತ್ರ ದೊರೆತಿಲ್ಲ ಎಂದರು.ಹಕ್ಕುಪತ್ರವನ್ನು ಪುತ್ತೂರು ಶಾಸಕರು ವಿತರಿಸಬೇಕು ಎಂದು ತಹಸೀಲ್ದಾರ್ ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಸರಕಾರಿ ಭೂಮಿಯನ್ನು ಕೇಳುತ್ತಿರುವಂಥದ್ದು, ಸರಕಾರಿ ಭೂಮಿಯಲ್ಲೇ ಅವರು ಇರುವುದು, ಅವರ ಹಕ್ಕನ್ನು ಕೇಳುತ್ತಿರುವುದು, ಅವರಪ್ಪನ ಮನೆಯಿಂದ ತಂದು ಜಾಗ ಕೊಡುವುದಲ್ಲ ಎಂದು ಹೇಳಿದ ಅವರು ಶಾಸಕರು ಎಂದರೆ ಜನಪ್ರತಿನಿಧಿಗಳು,ಜನರು ಆಯ್ಕೆ ಮಾಡಿರುವಂಥದ್ದು, ಜನರ ಸೇವೆ ಮಾಡ್ಲಿಕ್ಕಿರುವವರು.ಜನರ ಕಷ್ಟಕ್ಕೆ ಸ್ಪಂದಿಸುವುದು ಒಬ್ಬ ಪ್ರತಿನಿಧಿಯ ಕರ್ತವ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಬೆಳಗ್ಗೆ ಬಿಜೆಪಿಯ ಪುತ್ತೂರು ಹಾಗೂ ಬಂಟ್ವಾಳ ಕ್ಷೇತ್ರದ ಮುಖಂಡರು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವ ದಲ್ಲಿ ಪ್ರತಿಭಟನೆಗೆ ಸಾಥ್ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಪುತ್ತೂರು ಶಾಸಕರೇ ಬಂದು ಹಕ್ಕುಪತ್ರ ಕೊಡಬೇಕು ಎಂದೇನೂ ಇಲ್ಲ. ತಹಸೀ ಲ್ದಾರ್ ಅವರಿಗೆ ಸೂಚನೆ ನೀಡಿದರೂ ಆಗುತ್ತದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರು ತಹಸೀಲ್ದಾರ್ ಮೂಲಕವೇ ಹಕ್ಕುಪತ್ರ ಕೊಡಿಸುತ್ತಿದ್ದಾರೆ ಎಂದರು.
ತಹಸೀಲ್ದಾರ್ ಭೇಟಿ: ಮಧ್ಯಾಹ್ನದ ವೇಳೆ ತಹಸೀಲ್ದಾರ್ ಮಂಜುನಾಥ್ ಭೇಟಿ ನೀಡಿ ಮಾತನಾಡಿ, ಪುತ್ತೂರು ಶಾಸಕರು ಸ್ವತಃ ಕಾರ್ಯಕ್ರಮ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಮುಖಂಡರ ಸಹಿತ ಪ್ರತಿಭಟನಾನಿರತರು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಧರಣಿ ಮುಂದುವರಿಸಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು ಅವರೊಂದಿಗೆ ಪ್ರಮುಖರಾದ ವಿಕಾಸ್ ಪುತ್ತೂರು, ಆರ್. ಚೆನ್ನಪ್ಪ ಕೋಟ್ಯಾನ್, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಜೇಶ್ ಬನ್ನೂರು, ದೇವಪ್ಪ ಪೂಜಾರಿ ಬಾಳಿಕೆ, ದಿನೇಶ್ ಅಮ್ಮೂರು, ಪ್ರಸನ್ನ ಮಾರ್ತ, ಪುನೀತ್ ಮಾಡತ್ತಾರು, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ, ಹುಪ್ರಸಾದ್ ಯಾದವ್, ಶಿವಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರು, ಸುದರ್ಶನ ಬಜ, ರೊನಾಲ್ಡ್ ಡಿಸೋಜ, ಗೋವಿಂದ ಪ್ರಭು, ಹರಿಪ್ರಸಾದ್ ಭಂಡಾರಿಬೆಟ್ಟು, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಯಶೋಧರ ಕರ್ಬೆಟ್ಟು ಸಹಿತ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.








