Monday, May 6, 2024
spot_imgspot_img
spot_imgspot_img

ಸುಳ್ಯ: ನೈತಿಕ ಪೊಲೀಸ್ ಗಿರಿ ಆರೋಪ: ಹಿಂದೂ ಸಂಘಟನೆಯ ಕಾರ್ಯಕರ್ತರ ಗಡಿಪಾರಿಗೆ ಆದೇಶ

- Advertisement -G L Acharya panikkar
- Advertisement -

ಸುಳ್ಯ: ಕರ್ನಾಟಕ ಪೋಲಿಸ್ ಅಧಿನಿಯಮ 1953 ರ ಕಲಂ 55 ಪ್ರಕಾರ ಬಳ್ಳಾರಿ ಜಿಲ್ಲೆಗೆ ಲತೀಶ್ ಗುಂಡ್ಯ ಸೇರಿದಂತೆ ಐವರ ಮೇಲೆ ಗಡಿಪಾರು ಆದೇಶ ಹೊರಡಿಸಲಾಗಿದೆ.

ನೈತಿಕ ಪೊಲೀಸ್ ಗಿರಿ ಸೇರಿದಂತೆ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದೀಗ ಪೊಲೀಸರು ಮತ್ತೆ ಗಡಿಪಾರು ಅಸ್ತ್ರ ಪ್ರಯೋಗ ಮಾಡಿದ್ದು ಜಿಲ್ಲೆಯ ಐದು ಮಂದಿ ಬಜರಂಗದಳ ಸಂಘಟನೆಯ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಜರಂಗದಳ ಕಾರ್ಯಕರ್ತ ಲತೀಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಇವರಿಗೆ ಗಡಿಪಾರು ಮಾಡುವ ಕುರಿತಂತೆ ಕಾರಣ ಕೇಳಿ ಪೋಲಿಸ್ ಇಲಾಖೆಯು ನೋಟಿಸ್ ಜಾರಿ ಮಾಡಿದೆ. ಬಜರಂಗದಳದಲ್ಲಿ ಪುತ್ತೂರು ತಾಲೂಕು ಜವಾಬ್ದಾರಿ ಹೊಂದಿದ್ದ ದಿನೇಶ್, ಪ್ರಜ್ವಲ್ ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ ಬಜರಂಗದಳ ಕಾರ್ಯಕರ್ತ ನಿಶಾಂತ್ ಪ್ರದೀಪ್ ಮತ್ತು ದಿನೇಶ್ ಇವರಿಗೆ ನೋಟಿಸ್ ನೀಡಲಾಗಿದೆ. ನ. 22 ರಂದು ಇವರೆಲ್ಲರಿಗೂ ಪುತ್ತೂರಿನ ಸಹಾಯಕ ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಲತೀಶ್ ಗುಂಡ್ಯ ಇವರನ್ನು ಹೊರತುಪಡಿಸಿ ಉಳಿದ ನಾಲ್ಕು ಮಂದಿಯ ಮೇಲೆ ಒಂದು ಪ್ರಕರಣಗಳಿದ್ದು ಕೋಮು ಗಲಭೆ, ದನಸಾಗಾಟದ ಸಂದರ್ಭದಲ್ಲಿ ಹಲ್ಲೆ ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ ಎಂಬ ಆರೋಪ ಇದೆ.

ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಇವರಿಗೆ ಗಡಿಪಾರಿಗೆ ಮನವಿ ಮಾಡಲಾಗಿದೆ. ಎಲ್ಲರಿಗೂ ಗಡಿಪಾರು ನೋಟಿಸ್ ನೀಡಲಾಗಿದೆ ಲತೀಶ್ ಗುಂಡ್ಯ ರವರಿಗೆ ಬಳ್ಳಾರಿ ಜಿಲ್ಲೆಗೆ ಹಾಗೂ ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇವರೆಲ್ಲರಿಗೂ ನ. 22 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಗಡಿಪಾರು ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ ಬಾರಿಯೂ ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿಗೆ ಆದೇಶ ನೀಡಲಾಗಿತ್ತು ಆದರೆ ನ್ಯಾಯಾಲಯ ಮೆಟ್ಟಿಲೇರಿದ ಕಾರ್ಯಕರ್ತರು ಆದೇಶಕ್ಕೆ ತಡೆ ತಂದಿದ್ದರು. ಇದೀಗ ಸ್ಥಳಿಯ ಠಾಣೆಗಳ ಇನ್ಸ್ಪೆಕ್ಟರ್ ಗಳಿಂದ ಗಡಿಪಾರಿಗೆ ವರದಿ ತರಿಸಿಕೊಂಡು ಅಧಿಕೃತವಾಗಿ ಕಾನೂನು ಪ್ರಕಾರ ಗಡಿಪಾರು ಮಾಡಲು ಸರಕಾರ ಅಸ್ತ್ರ ಪ್ರಯೋಗ ಮಾಡಿದೆ.

- Advertisement -

Related news

error: Content is protected !!