Thursday, April 25, 2024
spot_imgspot_img
spot_imgspot_img

ನಿಯಂತ್ರಣ ತಪ್ಪಿ ಅಂಬುಲೆನ್ಸ್ ಪಲ್ಟಿ- ಕೊರೊನಾ ಸೋಂಕಿತ, ಬೈಕ್ ಸವಾರ ಸಾವು

- Advertisement -G L Acharya panikkar
- Advertisement -

ಹುಕ್ಕೇರಿ: ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಬೈಕ್ ಹಿಂಬದಿ ಸವಾರ ಹಾಗೂ ಅಂಬುಲೆನ್ಸ್ ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಹುಕ್ಕೇರಿ ಹೊರ ವಲಯದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೊರವಲಯದ ಬೆಲ್ಲದ ಬಾಗೇವಾಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರ ಮೂಲದ 51 ವರ್ಷದ ಕೊರೊನಾ ಸೋಂಕಿತ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ಮೃತನು ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ನಿವಾಸಿ. 

 ಅಥಣಿ ಖಾಸಗಿ ಆಸ್ಪತ್ರೆಯಿಂದ ಬೆಳಗಾವಿಗೆ ಹೊರಟಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಅಂಬುಲೆನ್ಸ್ ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದಾರೆ.ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

- Advertisement -

Related news

error: Content is protected !!