Friday, March 29, 2024
spot_imgspot_img
spot_imgspot_img

ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್‌ ಟ್ರಂಪ್‌- ಅಮೆರಿಕದಲ್ಲಿ ಮುಂದುವರಿದ ಪ್ರತಿಭಟನೆ

- Advertisement -G L Acharya panikkar
- Advertisement -

ವಾಷಿಂಗ್ಟನ್​: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಭರ್ಜರಿ ಜಯಬೇರಿ ಬಾರಿಸಿದ್ದಾರೆ. ಆದರೆ ಡೊನಾಲ್ಡ್​ ಟ್ರಂಪ್​ ಮಾತ್ರ ಇನ್ನೂ ಅಧಿಕೃತವಾಗಿ ತಮ್ಮ ಸೋಲನ್ನ ಒಪ್ಪಿಕೊಂಡಿಲ್ಲ.

ಈ ನಡುವೆ  ಚುನಾವಣೆಯ ಫಲಿತಾಂಶವನ್ನ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ವಾಷಿಂಗ್ಟನ್​ ಡಿ.ಸಿಯಲ್ಲಿ ಡೊನಾಲ್ಡ್​ ಟ್ರಂಪ್ ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ನೆರೆದು ಮತ್ತೆ 4 ವರ್ಷ ಟ್ರಂಪ್​ ಅಧ್ಯಕ್ಷರಾಗಬೇಕು ಎಂದು ತಮ್ಮ ಬೆಂಬಲ ಸೂಚಿಸಿದರು.

ವೈಟ್​ಹೌಸ್​ ಬಳಿಯ ಫ್ರೀಡಂ ಪ್ಲಾಜಾದಲ್ಲಿ ಪ್ರತಿಭಟನಾಕಾರರು ನೆರೆದಿದ್ದರು. ಮಧ್ಯಾಹ್ನದ ವೇಳೆಗೆ ಪ್ರತಿಭಟನಾನಿರತರ ಸಂಖ್ಯೆ ಏರುತ್ತಾ ಹೋಯ್ತು. ದಾರಿಯುದ್ದಕ್ಕೂ ಟ್ರಂಪ್​ ಬೆಂಬಲಿಗರು ಫೋರ್​​ ಮೋರ್ ಇಯರ್ಸ್(ಮತ್ತೆ ನಾಲ್ಕು ವರ್ಷ)​ ವೀ ವಾಂಟ್​ ಟ್ರಂಪ್(ನಮಗೆ ಟ್ರಂಪ್ ಬೇಕು) ಸ್ಟಾಪ್ ದಿ ಸ್ಟೀಲ್(ಕಳ್ಳತನ ನಿಲ್ಲಿಸಿ) ಅಂತಾ ಘೋಷಣೆಗಳನ್ನ ಕೂಗಿದರು ಎಂದು ವರದಿಯಾಗಿದೆ.

- Advertisement -

Related news

error: Content is protected !!