Wednesday, June 24, 2026
spot_imgspot_img
spot_imgspot_img

ಅಪ್ಘಾನಿಸ್ತಾನ ಮತ್ತು ಇರಾಕ್ ನಿಂದ ಸೇನಾ ಹಿಂತೆಗೆತ ಪ್ರಕ್ರಿಯೆ ಚುರುಕುಗೊಳಿಸಲು ಟ್ರಂಪ್ ಆದೇಶ

- Advertisement -
- Advertisement -

ವಾಷಿಂಗ್ಟನ್: ಅಪ್ಘಾನಿಸ್ತಾನ ಮತ್ತು ಇರಾಕ್ ನಿಂದ ಸೇನಾ ಹಿಂತೆಗೆತ ಪ್ರಕ್ರಿಯೆ ಚುರುಕುಗೊಳಿಸಲು ಅಮೆರಿಕ ನಿರ್ಧರಿಸಿದೆ. ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಶೀಘ್ರವೇ ಎರಡು ದೇಶಗಳಿಂದ 2500 ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಅಮೆರಿಕ ತೀರ್ಮಾನಿಸಿದೆ. ಅಪ್ಘಾನಿಸ್ತಾನ ಆಡಳಿತ ತಾಲಿಬಾನ್ ಮತ್ತು ಅಮೆರಿಕ ಈಗಾಗಲೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ.

ಅಪ್ಘಾನಿಸ್ತಾನದಿಂದ ಅಮೆರಿಕದ ಸೇನಾ ಹಿಂತೆಗೆತ ಭಾರತದ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಡಲಾಗಿದೆ. ತಾಲಿಬಾನ್ ಗಳು ಶಾಂತಿ ಮಾತುಕತೆ.ಜತೆ ಜತೆಗೆ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಯತ್ನ ನಡೆಸುತ್ತಿವೆ ಎಂದು ವಿಶ್ಲೇಷಿಸಲಾಗಿದೆ.

- Advertisement -

Related news

error: Content is protected !!