Sunday, June 14, 2026
spot_imgspot_img
spot_imgspot_img

ದೇಶದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ನಟ ಆಮೀರ್ ಖಾನ್‌ನಂತವರು ಕಾರಣ ಎಂದ ಬಿಜೆಪಿ ಸಂಸದ

- Advertisement -
- Advertisement -

ಬಾಲಿವುಡ್ ನಟ ಆಮೀರ್ ಖಾನ್ ಎರಡನೆಯ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಇವರ ಬಗ್ಗೆ ಬಂದಿರುವ ಟೀಕೆಗಳು, ಮೀಮ್ಸ್ಗಳು ತುಂಬಾನೇ ವೈರಲ್ ಆಗಿದೆ. ಇದೀಗಾ ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೂ ಆಮೀರ್ ಖಾನ್ ಉದಾಹರಣೆಯಾಗಿದ್ದಾರೆ.

ಇವರ ವಿಚ್ಛೇದನದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಬಿಜೆಪಿ ಸಂಸದ ಸುಧೀರ್ ಗುಪ್ತಾ ದೇಶದ ಜನಸಂಖ್ಯೆಯ ಅಸಮತೋಲನಕ್ಕೆ ನಟ ಅಮೀರ್ ಖಾನ್ ಅವರಂತಹ ಜನ ಹೊಣೆಗಾರರು ಎಂದು ನೇರವಾಗಿ ಆರೋಪಿಸಿದ್ದಾರೆ.

ವಿಶ್ವ ಜನಸಂಖ್ಯಾ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಅಮೀರ್ ಖಾನ್ ಇಬ್ಬರು ಮಕ್ಕಳು ಇರುವ ಮೊದಲ ಪತ್ನಿ ರೀನಾ ದತ್ತಾರನ್ನು ತೊರೆದರು. ಬಳಿಕ ಒಂದು ಮಗುವಿನೊಂದಿಗೆ ಕಿರಣ್ ರಾವ್ ಅವರನ್ನು ತೊರೆದರು. ಈಗ ಅಜ್ಜನಾಗುವ ವಯಸ್ಸಿನಲ್ಲಿ ಅವರು ಮೂರನೇ ಪತ್ನಿಯನ್ನು ಹುಡುಕುತ್ತಿದ್ದಾರೆ. ಇಂಥವರಿ0ದಲೇ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಜನಸಂಖ್ಯೆ ಸ್ಫೋಟ ಹಾಗೂ ಭಾರತ- ಪಾಕಿಸ್ತಾನ ವಿಭಜನೆಯ ವಿಷಯವನ್ನೂ ಅವರು ಈ ಸಂದರ್ಭದಲ್ಲಿ ಹೇಳೀದರು. ವಿಭಜನೆಯ ವೇಖೆ ಅತಿ ಕಡಿಮೆ ಜನರು ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ಭೂಮಿ ಸೇರಿತು. ಆದರೆ ಈ ವೇಳೆ ಭಾರೀ ಸಂಖ್ಯೆಯ ಜನ ಭಾರತಕ್ಕೆ ಮರಳಿದರು. ಭಾರತದಲ್ಲಿ ಭೂಮಿ ವಿಸ್ತರಣೆಯಾಗಲಿಲ್ಲ. ಆದರೆ ಜನಸಂಖ್ಯೆ ಈಗ 140 ಕೋಟಿಗೆ ಏರಿಕೆಯಾಗಿದೆ. ಅದಕ್ಕೆ ಇಂಥವರಲ್ಲದೇ ಇನ್ನಾರು ಕಾರಣ ಎಂದು ಪ್ರಶ್ನಿಸಿದರು.

- Advertisement -

Related news

error: Content is protected !!