Thursday, May 2, 2024
spot_imgspot_img
spot_imgspot_img

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್‌ ನದಿಯಲ್ಲಿ ಶವವಾಗಿ ಪತ್ತೆ

- Advertisement -G L Acharya panikkar
- Advertisement -

ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮಿತ್‌ಕುಮಾರ್ ಪಟೇಲ್ ಸೆಪ್ಟೆಂಬರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ಆಗಮಿಸಿದ್ದು, ನವೆಂಬರ್ 17 ರಂದು ನಾಪತ್ತೆಯಾಗಿದ್ದ. ಮೆಟ್ರೋಪಾಲಿಟನ್ ಪೊಲೀಸರು ನವೆಂಬರ್ 21 ರಂದು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಈತನ ದೇಹವನ್ನು ಪತ್ತೆ ಮಾಡಿದ್ದಾರೆ.

ಪಟೇಲ್‌ ರೈತ ಕುಟುಂಬಕ್ಕೆ ಸೇರಿದಾತ. ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ನವೆಂಬರ್ 17, 2023 ರಿಂದ ನಾಪತ್ತೆಯಾಗಿದ್ದ. ಈಗ ನವೆಂಬರ್ 21 ರಂದು ಪೊಲೀಸರು ಕ್ಯಾನರಿ ವಾರ್ಫ್‌ನಿಂದ ನೀರಿನಲ್ಲಿ ಆತನ ಮೃತದೇಹ ಹೊರತೆಗೆದಿದ್ದಾರೆ. ನಮ್ಮೆಲ್ಲರಿಗೂ ದುಃಖವಾಯಿತು. ಆದ್ದರಿಂದ, ನಾವು ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಆತನ ದೇಹವನ್ನು ಭಾರತಕ್ಕೆ ಕಳುಹಿಸಲು ನಿಧಿ ಸಂಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಸಂಬಂಧಿ ಪಾರ್ಥ್‌ ಪಟೇಲ್‌ ತಿಳಿಸಿದ್ದಾರೆ.

ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20 ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾಭ್ಯಾಸ ಆರಂಭಿಸಿದ್ದ. ಜೊತೆಗೆ ಅಮೆಜಾನ್‌ನಲ್ಲಿ ಅರೆಕಾಲಿಕ ಉದ್ಯೋಗ ಪ್ರಾರಂಭಿಸುವ ಯೋಜಿಸಿದ್ದ.

- Advertisement -

Related news

error: Content is protected !!