ವಿಟ್ಲ : ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ “ಮೆಚ್ಚಿ ಜಾತ್ರೆ” ಗೆ ಫೆ.20 ರಂದು ಗೊನೆ ಮೂಹೂರ್ತ ನಡೆಯಿತು.

ಪ್ರಧಾನ ಅರ್ಚಕರು ಗೊನೆ ಮೂಹೂರ್ತ ವಿಧಿ ವಿಧಾನಗಳನ್ನು ನೆರವೇರಿಸಿದರು. ದೈವಸ್ಥಾನದ ಆಡಳಿತ ವರ್ಗದವರು, ಪರಿಚಾರಕ ವರ್ಗದವರು ಉಪಸ್ಥಿತರಿದ್ದರು.

ಇದೇ ಬರುವ ಫೆ. 26 ರಂದು ರಾತ್ರಿ ಭಂಡಾರವೇರಿ ಫೆ.27 ರಂದು ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ “ಮೆಚ್ಚಿ ಜಾತ್ರೋತ್ಸವವು” ನಡೆಯಲಿದೆ. ಜಾತ್ರೋತ್ಸವದ ವಿಶೇಷ ನೇರಪ್ರಸಾರವು ನಿಮ್ಮ ನೆಚ್ಚಿನ ‘ವಿ ಟಿವಿ’ ಯಲ್ಲಿ ಪ್ರಸಾರವಾಗಲಿದೆ.



