- Advertisement -
- Advertisement -





ಆನೇಕಲ್: ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ನಿಧಿಗಾಗಿ ದತ್ತು ಮಗುವನ್ನು ಬಲಿಗೆ ತಯಾರಿ ಮಾಡಿಕೊಂಡು ಪೂಜೆ ನಡೆಸಿದ ಆರೋಪ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಕೇಳಿಬಂದಿದೆ. ಇವರು ಎಂಟು ತಿಂಗಳ ಹಿಂದೆ ಗಂಡು ಮಗುವನ್ನು ದತ್ತು ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಜ.3ರಂದು ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡ್ತಿದ್ದಾರೆ ಅಂತ ಮಕ್ಕಳ ಸಹಾಯವಾಣಿಗೆ ಅಪರಿಚಿತರು ಕರೆ ಮಾಡಿದ ಕಾರಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಮಾಹಿತಿ ಆಧರಿಸಿ ಪೋಲಿಸರು ದಾಳಿ ನಡೆಸಿದಾಗ ಮನೆಯ ಕೊಠಡಿಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ.ಎಂಟು ತಿಂಗಳ ಗಂಡು ಮಗುವನ್ನು ವಶಕ್ಕೆ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -








