Thursday, May 2, 2024
spot_imgspot_img
spot_imgspot_img

ಕುಡಿಯಲು ಹಣ ಕೊಡದ ಕೋಪ; ಮಗನನ್ನೇ ಗುಂಡು ಹಾರಿಸಿ ಕೊಂದ ತಂದೆ..!

- Advertisement -G L Acharya panikkar
- Advertisement -

ವ್ಯಕ್ತಿಯೊಬ್ಬರು ತನ್ನ ಮಗನನ್ನೇ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಮಾಡಿದ ವ್ಯಕ್ತಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್​ನ ಮನೆಯಲ್ಲಿ ವಾಸವಾಗಿರುವ ಸುರೇಶ್ ಹಾಗೂ ಮಗ ನರ್ತನ್ ಬೋಪಣ್ಣ (32) ಎಂದು ಗುರುತಿಸಲಾಗಿದೆ.

ಕೊಡಗಿನ ಮೂಲದವರಾದ ನರ್ತನ್‌ ಬೋಪಣ್ಣ ಕರೇಕಲ್‌ನ ಮನೆಯಲ್ಲಿ ತಂದೆ ‌ ಸುರೇಶ್‌ ಮತ್ತು ತಾಯಿ ಜತೆ ವಾಸವಾಗಿದ್ದರು. ನರ್ತನ್‌ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಸುರೇಶ್‌ಗೆ ಕುಡಿತದ ಹುಚ್ಚು ವಿಪರೀತವಾಗಿದ್ದು, ಕುಡಿಯಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಮನೆಯಲ್ಲೇ ಇರುತ್ತಿದ್ದ ಸುರೇಶ್‌ ಹೆಂಡತಿಯನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸದಾ ಕಾಲ ಕುಡಿತದ ಗುಂಗಿನಲ್ಲೇ ಇರುತ್ತಿದ್ದ ಸುರೇಶ್‌ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದರು. ಕುಡಿತಕ್ಕೆ ಹಣ ಕೇಳಿ ವಿಪರೀತ ಹಿಂಸೆ ನೀಡಿದ್ದರು, ಹೊಡೆಯಲು ಬಂದಿದ್ದರು. ಇದನ್ನೆಲ್ಲ ನೋಡಿದ ನರ್ತನ್‌ ತನ್ನ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದರು. ಕೋಣೆಯ ಒಳಗಿನಿಂದಲೇ ಬೆದರಿಕೆ ಹಾಕುತ್ತಿದ್ದರು ಸುರೇಶ್‌. ನೋಡೋಣ ಸ್ವಲ್ಪ ಹೊತ್ತು ಕಳೆದರೆ ಸರಿಯಾದೀತು ಎಂದು ನರ್ತನ್‌ ನಿರೀಕ್ಷಿಸಿದ್ದರು. ಅದಕ್ಕೆ ಪೂರಕವಾಗಿ ಸುರೇಶ್‌ ಒಳಗಿನಿಂದ ಸ್ವಲ್ಪ ತಣ್ಣಗಿದ್ದಂತೆ ಕಂಡಿತು. ಇತ್ತ ಒಳಗಿನಿಂದ ಸುರೇಶ್‌ ದೊಡ್ಡದೊಂದು ಕೃತ್ಯಕ್ಕೆ ಸಜ್ಜಾಗುತ್ತಿದ್ದರು. ಮಗ ತನ್ನನ್ನು ಕೋಣೆಯೊಳಗೆ ಕೂಡಿ ಹಾಕಿದ್ದರಿಂದ ಸಿಟ್ಟಿಗೆದ್ದ ಅವರು ತಮ್ಮ ಬಳಿ ಇದ್ದ ಲೈಸೆನ್ಸ್‌ ಹೊಂದಿದ ಸಿಂಗಲ್ ಬ್ಯಾರಲ್ ಗನ್ ಅನ್ನು ಹೊರಗೆ ತೆಗೆದು ನೇರವಾಗಿ ಗುಂಡು ಹೊಡೆದರು.

ಆ ಕೋಣೆಯ ಬಾಗಿಲು ಹಾಕಿತ್ತು. ಅದನ್ನು ಒಡೆಯಲೆಂದು ಅವರು ಬಾಗಿಲಿಗೆ ಗುಂಡು ಹಾರಿಸಿದರು. ಹಾಗೆ ಹಾರಿಸಿದ ಗುಂಡು ಬಾಗಿಲನ್ನು ಒಡೆದುದಲ್ಲದೆ ನೇರವಾಗಿ ಹೊರಗೆ ಕುಳಿತಿದ್ದ ನರ್ತನ್ ಬೋಪಣ್ಣ ಅವರ ತೊಡೆಯ ಮೇಲ್ಭಾಗಕ್ಕೆ ಹೊಕ್ಕಿದೆ. ಗುಂಡು ಕಾಲನ್ನು ಹೊಕ್ಕುತ್ತಿದ್ದಂತೆಯೇ ನರ್ತನ್‌ ತನ್ನ ಸಹೋದರಿಗೆ ಕರೆ ಮಾಡಿ ತಂದೆ ನನ್ನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದ. ಸಹೋದರಿ ಸಂಬಂಧಿಕರೊಬ್ಬರನ್ನ ಮನೆ ಬಳಿ ಹೋಗುವಂತೆ ಹೇಳಿದ್ದರು. ಆದರೆ, ಅವರೆಲ್ಲ ಬಂದು ನೋಡಿದಾಗ ಸುಮಾರು ಮೂರು ಗಂಟೆ ಆಗಿತ್ತು. ಅಷ್ಟೂ ಹೊತ್ತು ರಕ್ತ ಬಸಿದುಹೋಗಿ ನಿತ್ರಾಣಗೊಂಡಿದ್ದ ನರ್ತನ್ ಏಳುವ ಸ್ಥಿತಿಯಲ್ಲೇ ಇರಲಿಲ್ಲ. ಆ ಬಳಿಕ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ. ಇಷ್ಟೆಲ್ಲ ಆದರೂ ತಂದೆಯ ಕೋಪ ತಗ್ಗಿರಲಿಲ್ಲ. ಇತ್ತ ನರ್ತನ್‌ ತಾಯಿ ಹಾಸಿಗೆಯಲ್ಲೇ ಅಸಹಾಯಕರಾಗಿ ಬಿದ್ದುಕೊಂಡಿದ್ದರು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!