Wednesday, September 30, 2026
spot_imgspot_img
spot_imgspot_img

ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

- Advertisement -
- Advertisement -

ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಿಠಲ ಪದವಿಯನ್ನು ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಿಯಾಜ್ ಇವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು. ಹಾಗೂ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಪ್ರಸಕ್ತ ಸಾಲಿನ ವರದಿ ವಾಚಿಸಿದ ಜನರಲ್‌ ಮ್ಯಾನೇಜರ್ ಸುಚಿನ್ ರಾಜ್ ಶೆಟ್ಟಿ ಸಂಘವು ಸುಮಾರು 660,58,67,129.96 ವ್ಯವಹಾರ ನಡೆಸಿ 2,09,93,609.65 ರೂ ಲಾಭ ಗಳಿಸಿರುತ್ತದೆ. ಸದಸ್ಯರಿಗೆ ಶೇಕಡಾ 15 ಡಿವಿಡೆಂಡ್ ವಿತರಿಸಲಾಗುವುದು ಎಂದು ಹೇಳಿದರು.

ನಿರ್ದೇಶಕರುಗಳಾದ ರಾಜೇಂದ್ರ ರೈ ಪಿ, ಡಾ. ನವೀನ್ ಕೋಣಾಜೆ, ಪುಷ್ಪಬರಾಜ್ ಬಿ, ಅನಿತಾ ಮಿನೇಜಸ್, ಭಾರತಿ, ಶಿವಕುಮಾರ್ ಎಂ ಜಿ, ನಾಗೇಶ್ ಪಾಟಾಳಿ, ಸಂದೇಶ್ ಎಂ ಎಸ್, ರಘು, ರವಿ ನಾಯ್ಕ ಐ, ಲಕ್ಷ್ಮೀಕಾಂತ್ ಬೇಕಲ್ ಎಸ್, ಶ್ರೀಧರ ಎನ್, ಶೀನಪ್ಪ ಎನ್ ಮತ್ತು ಅನಿಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಮೇಶ್ ನಾಯಕ್ ಕೆ ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ನವೀನ್ ಪಿ ಎಸ್ ವಂದಿಸ, ನಿರ್ದೇಶಕ ಉಮಾನಾಥ ರೈ ಎಂ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!