- Advertisement -
- Advertisement -






ಹೊಸದಿಲ್ಲಿ,: ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳು ತಮ್ಮ ವಾರ್ಷಿಕ ಸ್ಥಿರ ಆಸ್ತಿ ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲೇಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಬಡ್ತಿ ನಿರಾಕರಣೆ ಸೇರಿದಂತೆ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಸೇವಾ ನಿಯಮಗಳ ಪ್ರಕಾರ, ಐಎಎಸ್ ಅಧಿಕಾರಿಗಳು ಪ್ರತಿ ವರ್ಷ ತಮ್ಮ ಸ್ಥಿರ ಆಸ್ತಿ ರಿಟರ್ನ್‌ನ್ನು ಮುಂದಿನ ವರ್ಷದ ಜನವರಿ 31ರೊಳಗೆ ಸಲ್ಲಿಸಬೇಕು. ಈ ಕರ್ತವ್ಯದಲ್ಲಿ ವಿಫಲರಾದರೆ, ಅದನ್ನು ಗಂಭೀರ ಸೇವಾ ಲೋಪ ಎಂದು ಪರಿಗಣಿಸಲಾಗುತ್ತದೆ ಎಂದು ಸಿಬ್ಬಂದಿ ಸಚಿವಾಲಯದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಮುಂದಿನ ವೇತನ ಶ್ರೇಣಿ ಅಥವಾ ಬಡ್ತಿಗೆ ಅಧಿಕಾರಿಗಳನ್ನು ಪರಿಗಣಿಸುವ ಮೊದಲು ಆಸ್ತಿ ವಿವರ ಸಲ್ಲಿಕೆ ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಮತ್ತು ಜವಾಬ್ದಾರಿತನವನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
- Advertisement -








