ಸ್ಮಾರ್ಟ್‌ಫೋನ್ ಮಾರುಕಟ್ಟೆ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರೋ ಟೆಕ್ ಕಂಪನಿ ಎಂದರೆ ಆ್ಯಪಲ್. ಬಹು ನಿರೀಕ್ಷಿತ ಆ್ಯಪಲ್ ಐಫೋನ್ 16 ಸೀರಿಸ್ ಬಿಡುಗಡೆಯಾಗಿದೆ. ಹಲವು ಅಪ್‌ಗ್ರೇಡ್, ಅತ್ಯಾಧುನಿಕ ಫೀಚರ್ಸ್ ಜೊತೆ ಐಫೋನ್ 16 ಬಿಡುಗಡೆಯಾಗಿದೆ. ಭಾರತದಲ್ಲಿ ನೂತನ ಫೋನ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಏನೆಲ್ಲಾ ಫೀಚರ್ಸ್ ಹೊಂದಿದೆ?
ಆಪಲ್ 16 ಪ್ರೊ ಮೊಬೈಲ್ ಡಿಸ್‌ಪ್ಲೇ 6.3 ಇದೆ. 16 Pro Max ನ ಡಿಸ್‌ಪ್ಲೇ ಗಾತ್ರ 6.9 ಮತ್ತು ಐಫೋನ್ 16 ಡಿಸ್‌ಪ್ಲೇ ಹಳೆದ ಐಫೋನ್ 15ರಂತೆ ಡಿಸೈನ್ ಮಾಡಲಾಗಿದೆ. ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆ ಇಲ್ಲ. ಈ ಫೋನ್‌ಗಾಗಿ ಹೊಸ A ಸರಣಿ ಚಿಪ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕೃತ AI ಫೀಚರ್ಸ್‌ಗಳು ಇರಲಿವೆ.
ಐಫೋನ್ 16 3561mAh, ಐಫೋನ್ 16 ಪ್ಲಸ್ 4006mAh, ಐಫೋನ್ 16 ಪ್ರೊ 3355mAh ಮತ್ತು iPhone 16 ಪ್ರೊ ಮ್ಯಾಕ್ಸ್ 4676mAh ಬ್ಯಾಟರಿ ಕ್ಯಾಪಸಿಟಿ ಹೊಂದಿದೆ. ಆ್ಯಪಲ್ ಬಳಕೆದಾರರಿಗೆ ಕ್ಯಾಪ್ಚರ್ ಬಟನ್ ನೀಡಿದೆ. ಇದರಿಂದ ಸುಲಭವಾಗಿ ಫೋಟೋಗಳನ್ನು, ವಿಡಿಯೋಗಳನ್ನು ಶೂಟ್ ಮಾಡಬಹುದು. ಐಫೋನ್ 16 ಪ್ರೊ ತೂಕ 194 ಗ್ರಾಂ ಆಗಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್‌ನ ತೂಕ 225 ಗ್ರಾಮ್ ಆಗಿದೆ.
ಹಿಂದಿನ ಮಾಡೆಲ್‌ಗೆ ಹೋಲಿಸಿದರೆ ಐಫೋನ್ 16 ಹಲವು ಹೊಸತನಕ್ಕೆ ಸಾಕ್ಷಿಯಾಗಿದೆ. ಆ್ಯಪಲ್ ಸ್ಟೋರ್, ಅಮೇಜಾನ್, ಫ್ಲಿಪ್‌ಕಾರ್ಟ್ ವೇದಿಕೆಯಲ್ಲಿ ಪ್ರಿ ಆರ್ಡರ್ ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ. ಐಫೋನ್ 16 ಆರಂಭಿಕ ಬೆಲೆ 67,000 ರೂಪಾಯಿ. ಟಾಪ್ ಮಾಡೆಲ್ ಐಫೋನ್ 16 ಪ್ರೋ ಮ್ಯಾಕ್ಸ್ ಬೆಲೆ 1,44,900 ರೂಪಾಯಿ
ಭಾರತದಲ್ಲಿ ಐಫೋನ್ 16ಬೆಲೆ
ಐಫೋನ್ 16 ಬೆಲೆ: 79,900 ರೂಪಾಯಿ
ಐಫೋನ್ 16 ಪ್ಲಸ್ ಬೆಲೆ : 89,900 ರೂಪಾಯಿ
ಐಫೋನ್ 16 ಪ್ರೋ ಬೆಲೆ : 1,19,900 ರೂಪಾಯಿ(128 ಜಿಬಿ)
ಐಫೋನ್ 16 ಪ್ರೋ ಮ್ಯಾಕ್ಸ್ ಬೆಲೆ :1,44900 ರೂಪಾಯಿ(256 ಜಿಬಿ)