Tuesday, May 7, 2024
spot_imgspot_img
spot_imgspot_img

ಹೆತ್ತ ತಾಯಿಯೇ ಮಗಳ ಮೇಲೆ ಅತ್ಯಾಚಾರ ನಡೆಸಲು ಅವಕಾಶ ; ಜಾಮೀನು ಅರ್ಜಿ ತಿರಸ್ಕಾರ

- Advertisement -G L Acharya panikkar
- Advertisement -

ಹೆತ್ತ ತಾಯಿಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು, ಅತ್ಯಾಚಾರ ನಡೆಸಲು ಅನುವು ಮಾಡಿಕೊಟ್ಟಿರುವ ಹೇಯ ಕೃತ್ಯ ನಡೆದಿದೆ. ನಿರೀಕ್ಷಣಾ ಜಾಮೀನು ಕೋರಿ ಆ ತಾಯಿಯು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ‘ತಾಯ್ತನಕ್ಕೆ ಅಪಮಾನ’ ಎಂದಿದೆ.

2018ರ ಅಕ್ಟೋಬರ್‌ನಲ್ಲಿ ಮೊದಲನೆಯ ಆರೋಪಿಯಾದ ಮಲತಂದೆಯು ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದನು. ಅದಾದ ನಂತರ ನಿರಂತರವಾಗಿ ಹಲವು ಬಾರಿ ಕೊಪ್ಪಂನ ಬಾಡಿಗೆ ಮನೆಯಲ್ಲಿ ಅತ್ಯಾಚಾರ ಮಾಡಿದ್ದನು. ಕೊಯಮತ್ತೂರಿನ ಹೋಟೆಲ್ ಕ್ಯಾಸ್ಟಿಲೋದಲ್ಲಿ ತಾಯಿಯ ಒಪ್ಪಿಗೆ ಮೇರೆಗೆ ಆರೋಪಿಯು ಅತ್ಯಾಚಾರ ನಡೆಸಿರುವ ಆರೋಪ ಮಾಡಲಾಗಿದೆ.

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ದೌರ್ಜನ್ಯ ನಡೆಸಲು ಮಲತಂದೆಗೆ ಅವಕಾಶ ಮಾಡಿಕೊಟ್ಟಿರುವ ಆರೋಪವು ತಾಯಿಯ ಮೇಲಿದ್ದು, ಅದಕ್ಕೆ ಸಂಬಂಧಿಸಿದಂತೆ ಆಕೆಯು ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಪಿನಾಥ್ ಪಿ, “ತಾಯಿಯ ಮೇಲಿನ ಆರೋಪಗಳು ಸತ್ಯವೆಂದು ಸಾಬೀತಾದರೆ, ತಾಯ್ತನಕ್ಕೆ ಅಪಮಾನ ಮಾಡಿದಂತೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಹೆತ್ತ ತಾಯಿಯೂ ಆರೋಪಿಯಾಗಿರುವುದರಿಂದ ತನ್ನ ಅಪ್ರಾಪ್ತ ವಯಸ್ಸಿನ ಮಗಳಿಂದ ಆರೋಪಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಾಕ್ಷ್ಯ ಹೇಳಿಸುವ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದನ್ನು ಕೋರ್ಟ್ ಗಮನಿಸಿದೆ. ಅದೇ ಕಾರಣದಿಂದಾಗಿ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ನಡೆದಿರುವ ಅತ್ಯಾಚಾರದಲ್ಲಿ ಹೆತ್ತ ತಾಯಿಯು ಎರಡನೇ ಆರೋಪಿಯಾಗಿದ್ದಾರೆ. ಮಲತಂದೆಯು ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ಪೋಕೋ ಕಾಯ್ದೆಯ, ಐಪಿಸಿ ಸೆಕ್ಷನ್ 376(2)(n), 376 (3) ಹಾಗೂ ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ ಸೆಕ್ಷನ್ 75 ಅಡಿಯಲ್ಲಿ ಆರೋಪ ದಾಖಲಿಸಲಾಗಿದೆ.

- Advertisement -

Related news

error: Content is protected !!