Sunday, June 7, 2026
spot_imgspot_img
spot_imgspot_img

ವಿಟ್ಲ ಕಂಬಳಬೆಟ್ಟು”ಆಕೃತಿ” ಸಿಮೆಂಟ್ ಪ್ರಾಡಕ್ಟ್ಸ್ ಶುಭಾರಂಭ

- Advertisement -
- Advertisement -

ವಿಟ್ಲ: ವಿಟ್ಲ ಕಂಬಳಬೆಟ್ಟುಎಸ್ಸಾರ್ ಪೆಟ್ರೋಲ್ ಪಂಪ್ ಹತ್ತಿರ “ಆಕೃತಿ” ಸಿಮೆಂಟ್ ಪ್ರಾಡಕ್ಟ್ಸ್ ಇಂದು ಶುಭಾರಂಭಗೊಂಡಿತು.ಮಾಲಕರ ತಂದೆಯಾದ ಶಿವರಾಮ ಗೌಡ ಮತ್ತು ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತಾ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಪ್ರಾರ್ಥನೆಯನ್ನು ಜಯಂತ ಕೋಲ್ಪೆ ಮಾಡಿದರು. ಮಾಲಕರಾದ ದಿನೇಶ್ ಕುಮಾರ್ ಮಾಡ್ತೇಲ್ ಸ್ವಾಗತಿಸಿದರು.ಕಾರ್ಯಕ್ರಮ ನಿರೂಪಣೆ & ವಂದನಾರ್ಪಣೆ ದಿನೇಶ್ ಮಾಮೇಶ್ವರ ನೆರವೇರಿಸಿದರು.

ಕಾರ್ಯಕ್ರಮದಲ್ಲಿಕಂಬಳಬೆಟ್ಟು ಜುಮ್ಮಾ ಮಸ್ಜೀದ್ ನ ಮುದರಿಸ್ ಕೆ.ಇಬ್ರಾಹಿಂ ಮದನಿ,
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ. ಎಸ್ ಸುರೇಶ್ ಮುಕ್ಕುಡ  ಉದ್ಯಮಿಗಳಾದ ವಿ. ಕೆ. ಅಬ್ದುಲ್ ಖಾದರ್, ವಿ.ಕೆ. ಅಶ್ರಫ್, ಲಿಂಗಪ್ಪ ಗೌಡ ಅಳಿಕೆ ಮೊದಲಾದವರು ಉಪಸ್ಥಿತರಿದ್ದರು.


ಎಸಿಸಿ ಸಿಮೆಂಟ್ ನಿಂದ ತಯಾರಿಸಲ್ಪಟ್ಟ ಕಿಟಕಿ,ದಾರಂದ,ಇಟ್ಟಿಗೆ,ಬಾವಿ ರಿಂಗ್,ಇಂಟರ್ ಲಾಕ್,ಹಾಗೂ ಹಲವು ತರದ ಸಿಮೆಂಟ್ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭ್ಯವಿದೆಂದು ಆಕೃತಿ ಸಿಮೆಂಟ್ ಪ್ರಾಡಕ್ಟ್ ನ ಮಾಲಕರಾದ ದಿನೇಶ್ ಕುಮಾರ್ ತಿಳಿಸಿದ್ದಾರೆ.

- Advertisement -

Related news

error: Content is protected !!