Saturday, September 5, 2026
spot_imgspot_img
spot_imgspot_img

ಹಳೆಯಂಗಡಿ: 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

- Advertisement -
- Advertisement -

ಮಂಗಳೂರು: 1998ರ ಡಿಸೆಂಬರ್ 31ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ ಪ್ರಕರಣದಲ್ಲಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿ ಲೀಲಾಧ‌ರ್ (52, ಪಕ್ಷಿಕೆರೆ ಕೆಮ್ರಾಲ್ ಗ್ರಾಮ) ಅವರನ್ನು ಇತ್ತೀಚೆಗೆ ಮುಲ್ಕಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಲೀಲಾಧ‌ರ್ ಅವರು ವಿದೇಶದಿಂದ ವಾಪಸಾಗಿ ಪಕ್ಷಿಕೆರೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವೇಳೆ ಪೊಲೀಸರು ದಸ್ತಗಿರಿ ನಡೆಸಿದರು.ಇದೇ ಪ್ರಕರಣದಲ್ಲಿ ದುಬೈಗೆ ಪರಾರಿಯಾಗಿದ್ದ ಇನ್ನೊಬ್ಬ ಆರೋಪಿ ಚಂದ್ರಹಾಸ್ ಕೇಶವ ಶೆಟ್ಟಿ (59, ಪೆಡುಪಣಂಬೂರು, ಹಳೆಯಂಗಡಿ) ಅವರನ್ನು ದಿನಾಂಕ 30-08-2025 ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಪ್ರಸ್ತುತ ಅವರು ಸಹ ನ್ಯಾಯಾಂಗ ಬಂಧನದಲ್ಲಿದ್ದಾರೆ.1998ರ ಗಲಭೆ ವೇಳೆ ಬೆಂಕಿ ಹಚ್ಚಿ ಅಶಾಂತಿ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಮುಲ್ಕಿ ಠಾಣೆಯಲ್ಲಿ ಅ.ಕ್ರ. 06/1999, 0 143, 147, 148, 436, 427 r/w 149 IPC ಪ್ರಕರಣ ದಾಖಲಾಗಿತ್ತು. ಈ ಇಬ್ಬರು ಆರೋಪಿ ಪೊಲೀಸರು ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ, ಹಿಂದಿನ ತನಿಖಾಧಿಕಾರಿಗಳು ದೋಷಾರೋಪಣಾ ಪತ್ರದಲ್ಲಿ ಅವರ ವಿರುದ್ದ ಉಲ್ಲೇಖಿಸಿದ್ದರು.ಮಾನ್ಯ ಮೂಡಬಿದ್ರಿ ಹಿರಿಯ CJ & JMFC ನ್ಯಾಯಾಲಯವು CC No. 665/2014, LPC No. 10/2017 ರೂಪದಲ್ಲಿ ಪ್ರಕರಣ ದಾಖಲಿಸಿತ್ತು.

ಇದೀಗ ನ್ಯಾಯಾಲಯದ ಉದ್ಯೋಷನೆ ಆದೇಶವನ್ನು ಉಲ್ಲಂಘಿಸಿ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಇವರಿಬ್ಬರ ವಿರುದ್ಧ ಪ್ರತ್ಯೇಕವಾಗಿ 88/2025 ಮತ್ತು 94/2025 ಕಲಂ 208, 209 BNS ಅಡಿಯಲ್ಲಿ ಹೊಸ ಪ್ರಕರಣಗಳು ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

- Advertisement -

Related news

error: Content is protected !!