Wednesday, July 22, 2026
spot_imgspot_img
spot_imgspot_img

ಕಡಬ: ಪೇಸ್‌ಬುಕ್‌ನಲ್ಲಿ ದ್ವೇ಼ಷ ಭಾವನೆ ಉಂಟು ಮಾಡುವ ಸಂದೇಶ ಹರಡಿದ ಆರೋಪ; ಪ್ರಕರಣ ದಾಖಲು

- Advertisement -
- Advertisement -

ಕಡಬ: ಪೇಸ್‌ಬುಕ್‌ನಲ್ಲಿ ದ್ವೇಷ ಭಾವನೆಯನ್ನು ಉಂಟುಮಾಡುವ ಸಂದೇಶ ಹರಡಿದ ಆರೋಪದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.26ರಂದು ಕಡಬ ತಾಲೂಕಿನ ರತಿನ್ ಎಂಬವರು ತನ್ನ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣವಾದ ಪೇಸ್‌‌ಬುಕ್ ವೀಕ್ಷಣೆ ಮಾಡುತ್ತಿರುವಾಗ ಪೇಸ್‌ಬುಕ್‌ನಲ್ಲಿ Sunil Panapila ಎಂಬ ಪೇಸ್‌ಬುಕ್‌ ಅಕೌಂಟ್‌‌ನಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟಾಗುವಂತೆ ಉತ್ತೇಜನ ನೀಡಿದ್ದು ಹಾಗೂ ಧಾರ್ಮಿಕ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ದ್ವೇಷಭಾವನೆಯನ್ನುಂಟು ಮಾಡುವ ಕೃತ್ಯವನ್ನು ಸಾಮಾಜಿಕ ಜಾಲಾತಾಣದಲ್ಲಿ ಎಸಗಿರುವುದು ಕಂಡುಬಂದಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ:55/2025.ಕಲಂ: 196,299 BNS. ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!