Friday, June 19, 2026
spot_imgspot_img
spot_imgspot_img

ಕಾಲಿಗೆ ಚಕ್ರಕಟ್ಟಿ ಮತಯಾಚನೆಗಿಳಿದ ಅಶೋಕ್ ರೈ ಪತ್ನಿ..! ಸದ್ದಿಲ್ಲದೆ ನಡೆಯುತ್ತಿದೆ ಮನೆ ಮನೆ ಭೇಟಿ

- Advertisement -
- Advertisement -

ಪತಿಯ ಯಶಸ್ವಿನ ಹಿಂದೆ ಪತ್ನಿ ಇದ್ದೇ ಇರ್‍ತಾಳಂತೆ. ತನ್ನ ಪತಿ ಚುನಾವಣೆಗೆ ನಿಂತಿದ್ದು ಹೇಗಾದರೂ ಮಾಡಿ ಅವರನ್ನು ಗೆಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರ ಪತ್ನಿ ಸುಮಾ ಎ ರೈ ಕಳೆದ ಒಂದು ವಾರದಿಂದ ಚುನಾವಣಾ ಖಾಡಕ್ಕೆ ಇಳಿದಿದ್ದಾರೆ.

ಕಾಲಿಗೆ ಚಕದ್ರ ಕಟ್ಟಿ ಗ್ರಾಮ ಗ್ರಾಮಗಳಿಗೆ ತೆರಳಿ ಮಹಿಳೆಯರ ತಂಡವನ್ನು ಕಟ್ಟಿ ಮನೆಗೆ ಮನೆಗೆ ಭೇಟಿ ನೀಡಿ ಚುನಾವಣ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾ ಎ ರೈ ಅವರ ಪಾಲಿಗೆ ಇದು ಮೊದಲನೇ ಚುನಾವಣಾ ಪ್ರಚಾರ ಆಗಿದ್ದು ಕಾಂಗ್ರೆಸ್ ಗೆಲ್ಲಿಸಿ ಎಂದು ಹಳ್ಳಿ ಕಡೆ ಹೆಜ್ಜೆ ಹಾಕಿದ್ದಾರೆ.

ಇವರ ತಂಡದ ಜೊತೆಯಲ್ಲಿ ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ,ನಯನಾ ರೈ ನೆಲ್ಲಿಕಟ್ಟೆ ಹಾಗೂ ಅಶೋಕ್ ರೈ ಸಹೋದರಿಯರೂ ಇದ್ದಾರೆ. ಈಗಾಗಲೇ ಅರಿಯಡ್ಕ, ಕೆದಂಬಾಡಿ, ಕೆಯ್ಯೂರು, ನೆಟ್ಟಣಿಗೆ ಮುಡ್ನೂರಿನ ವಿವಿಧ ಮನೆಗಳಿಗೆ ಭೇಟಿ ಕಾರ್ಯ ಪೂರ್ಣಗೊಂಡಿದೆ.

- Advertisement -

Related news

error: Content is protected !!