

ಅಶೋಕನಗರ: ಶ್ರೀ ಶಾರದಾಂಬ ಭಜನಾ ಮಂಡಳಿ ಅಶೋಕನಗರ (ರಿ) ಇಲ್ಲಿ ಶ್ರೀ ಶಾರದಾ ಮಾತೆಯ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಸತ್ಯನಾರಾಯಣ ಪೂಜೆ, ಅರ್ಧ ಏಕಾಹ ಭಜನೆ ಕಾರ್ಯಕ್ರಮ ವೇದಮೂರ್ತಿ ಶ್ರೀಧರ್ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ ಮಾ 23 ಆದಿತ್ಯವಾರ & ಮಾ 24 ನೇ ಮತ್ತು ಸೋಮವಾರದಂದು ನಡೆಯಲಿದೆ.
ಮಾ. 23 ಆದಿತ್ಯವಾರದಂದು ಬೆಳಗ್ಗೆ 6 ರಿಂದ 6 ರವರೆಗೆ ಅರ್ಧ ಏಕಾಹ ಭಜನೆ ನಡೆಯಲಿದೆ. ನಂತರ ಶ್ರೀ ಸತ್ಯನಾರಾಯಣ ದೇವರ ಪೂಜೆ, ಬಳಿಕ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ಮಾ. 24 ನೇ ಮತ್ತು ಸೋಮವಾರದಂದು ರಾತ್ರಿ ಶ್ರೀ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ ಅಧ್ಯಕ್ಷರು ಶಾರದಾಂಬ ಭಜನಾ ಮಂಡಳಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿತೇಶ್ ಜೈನ್ ಅಧ್ಯಕ್ಷರು, ಚಂದ್ರನಾಥ ಸ್ವಾಮಿ ಬಸದಿ ವಿಟ್ಲ, ಸಂಜೀವ ಪೂಜಾರಿ ಚಂದಳಿಕೆ, ಉದ್ಯಮಿ ಮಾಲಕರು ಭಾರತ್ ಅಡಿಟೋರಿಯಂ ಚಂದಳಿಕೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ ಬಾಲಕೃಷ್ಣ ಕಾರಂತ ಎರುಂಬು ಧಾರ್ಮಿಕ ಭಾಷಣಗಾರರಾಗಿ ಭಾಗವಹಿಸಲಿದ್ದಾರೆ.
ಬಳಿಕ ಶಾರದಾ ಆರ್ಟ್ಸ್ ಕಲಾವಿದರು (ರಿ) ಮಂಜೇಶ್ವರ ಅಭಿನಯದ ಕೃಷ್ಣ ಜಿ ಮಂಜೇಶ್ವರ ಸಾರಥ್ಯದ ಕಥೆ ಎಡ್ಡೆಂಡು ನಾಟಕ ಪ್ರದರ್ಶನಗೊಳ್ಳಲಿದೆ.